ಧಾರವಾಡದಲ್ಲಿ ಗ್ರೀನ್ ಎನರ್ಜಿ ಶೋರೂಂ

Published on

ಹುಬ್ಬಳ್ಳಿ: ಧಾರವಾಡದ ಎನ್ ಟಿಟಿಎಫ್ ಬಳಿಯ ಸ್ವಾಗತ ಕಾಂಪ್ಲೆಕ್ಸ್ ನಲ್ಲಿ ಗ್ರೀನ್ ಎನಜಿರ್ ಗ್ರುಪ್ಸ್ ನ ಮೊದಲ ಇಲೆಕ್ಟ್ರಿಕ್ ವೆಹಿಕಲ್ ಶೋರೂಂ ಅನ್ನು ಬುಧವಾರ ಆರಂಭಿಸಲಾಯಿತು.

ಶ್ರೀಸಾಯಿ ಸೈನ್ಸ್ ಪಿಯು ಕಾಲೇಜಿನ ಚೇರ್ಮನ್ ಡಾ. ವೀಣಾ ಬಿರಾದಾರ ಅವರು ಶೋರೂಂ ಉದ್ಘಾಟಿಸಿ ಮಾತನಾಡಿ, ಇಲೆಕ್ಟ್ರಿಕ್ ವೆಹಿಕಲ್ ಖರೀದಿಸುವ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನೀಡುತ್ತಿರುವುದು ಅತ್ಯುತ್ತಮ ಅವಕಾಶವಾಗಿದೆ. ಜಾಗತಿಕ ತಾಪಮಾನ ಏರುತ್ತಿರುವ ಈ ಸಂದರ್ಭದಲ್ಲಿ ಹಲವು ವಿನೂತನ ಅನುಕೂಲತೆಗಳನ್ನು ಹೊಂದಿರುವ ವೆಹಿಕಲ್ಗಳು ಮಾರುಕಟ್ಟೆಗೆ ಬಂದಿರುವುದು ವಿಶೇಷ ಎಂದರು.

ಪರಿಸರ ಸ್ನೇಹಿ ವಾಹನಗಳು ಇಂದಿನ ಅಗತ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ತಾಂತ್ರಿಕತೆ ಬಹಳಷ್ಟು ಬೆಳೆಯುತ್ತಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕೆಂದರು.

ಉದ್ಯಮಿ ಪ್ರಕಾಶ ನಾಜರೆ ಮಾತನಾಡಿ, ಗ್ರೀನ್ ಎನಜಿರ್ ಗ್ರುಪ್ನವರು ಇಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಶೋರೂಂ ಸ್ಥಾಪಿಸಿರುವುದು ಅಭಿನಂದನೀಯ ಕಾರ್ಯ. ಇಂದು ಬಹಳಷ್ಟು ಕಡೆ ನೀರಿನ ಕೊರತೆ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಇಂಧನ ಕೊರತೆ ನೀಗಲು ಇಲೆಕ್ಟ್ರಿಕ್ ವೆಹಿಕಲ್ ಮುಂಚೂಣಿಗೆ ಬರಲಿವೆ ಎಂದರು.

ಶಿಕ್ಷಣ ತಜ್ಞ ವಿನಾಯಕ ಜೋಶಿ ಮಾತನಾಡಿ, ಇಂಧನ ಕೊರತೆ ಸಮಸ್ಯೆ ಬಹಳಷ್ಟು ಕಾಡುತ್ತಿರುವ ಇಂದಿನ ದಿನದಲ್ಲಿ ಸುಸ್ಥಿರ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.

ಅತಿಥಿಯಾಗಿದ್ದ ರವೀಂದ್ರ ಚಿಕ್ಕರಡ್ಡಿ ಮಾತನಾಡಿ, ಆವಾಸ ನಿರ್ಮಾಣ ಸಂಸ್ಥೆಯ ಎಂಡಿ ಮಂಜುನಾಥ ಕುರಹಟ್ಟಿ ಅವರು ಇದೀಗ ಗ್ರೀನ್ ಎನಜಿರ್ ಸಂಸ್ಥೆ ಸ್ಥಾಪನೆಗೆ ಮುಂದಾಗಿ ಮನೆಯ ಜತೆಗೆ ಇಲೆಕ್ಟ್ರಿಕ್ ವೆಹಿಕಲ್ಗಳನ್ನು ಸಮಾಜಕ್ಕೆ ನೀಡಿ ತಮ್ಮದೇ ಆದ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬಹಳಷ್ಟು ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದಾರೆ. ಗ್ರೀನ್ ಎನಜಿರ್ ಗ್ರುಪ್ನವರು ನೀರಾವರಿಗೆ ಸೋಲಾರ್ ಎನಜಿರ್ ಬಳಸಲು ಆಧ್ಯತೆ ನೀಡಿದ್ದಾರೆ.

ತಾಂತ್ರಿಕ ತಜ್ಞರು ಬೀದಿಬದಿ ವ್ಯಾಪಾರಸ್ಥರಿಗಾಗಿ ಇ ಕಾರ್ಟ್ ನಿರ್ಮಾಣ, ಸೋಲಾರ್ ಎನಜಿರ್ಯನ್ನು ಟ್ರಾಕ್ಟರ್, ಜೆಸಿಬಿ ಸೇರಿ ಇನ್ನೂ ಕೆಲವೆಡೆ ಬಳಕೆಗೆ ಪ್ರಯತ್ನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net