

ಆನೇಕಲ್ : ಭಾರತದ ಬಾಹ್ಯಾಕಾಶ ಮಿಷನ್ಗಳು, ಸಾರಿಗೆ ಮತ್ತು ಶುದ್ಧ ಇಂಧನ ಭವಿಷ್ಯದಲ್ಲಿ ಹೈಡ್ರೋಜನ್ ಇಂಧನ ದೊಡ್ಡಮಟ್ಟದ ಕ್ರಾಂತಿ ಮಾಡಲಿದೆ, ಇದರಿಂದ ದೇಶದ ಪ್ರಗತಿಯ ದಿಕ್ಕು ಬದಲಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯ ಡಾ.ವಿ.ನಾರಾಯಣನ್ ತಿಳಿಸಿದರು.
ಪಟ್ಟಣಕ್ಕೆ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯ, ಭಾರತೀಯ ವಿಾನ ಸಂಸ್ಥೆ (ಐಐಎಸ್ಸಿ) ಸಂಯುಕ್ತವಾಗಿ ಆಯೋಜಿಸಿದ್ದ "ಹೈಡ್ರೋಜನ್ ಇಂಧನ ತಂತ್ರಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು' ಎಂಬ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು. ವಿಶ್ವ ಎರಡು ಸವಾಲು ಎದುರಿಸುತ್ತಿದೆ, ಹೆಚ್ಚುತ್ತಿರುವ ಇಂಧನದ ಬೇಡಿಕೆ ಮತ್ತು ಹಸಿರು ಮನೆ ಅನಿಲಗಳ ಹೊರ ಸೂಸುವಿಕೆ ತಗ್ಗಿಸುವ ತುರ್ತು ಅಗತ್ಯ. ಈ ಸಂದರ್ಭದಲ್ಲಿ ಹೈಡ್ರೋಜನ್ ಅತ್ಯಂತ ಶುದ್ಧ ಮತ್ತು ಹಸಿರು ಇಂಧನವಾಗಿದ್ದು, ಭವಿಷ್ಯದ ಭರವಸೆಯ ಬೆಳಕಾಗಲಿದೆ ಎಂದು ಹೇಳಿದರು. ಇಸ್ರೋದಲ್ಲಿ ನಮ್ಮ ಹಲವು ಮುನ್ನಡೆಗಳಲ್ಲಿ ಹೈಡ್ರೋಜನ್ ಮುಖ್ಯವಾಗಿದೆ. ಜನವರಿಯಲ್ಲಿ ಭಾರತವು ಯಶಸ್ವಿಯಾಗಿ ಜಿಎಸ್ಎಲ್ವಿ ಮಾರ್ಕ್ ರಾಕೆಟ್ ಉಡಾಯಿಸಿತ್ತು, ಇದರಲ್ಲಿ ಲಿಕ್ವಿಡ್ ಹೈಡ್ರೋಜನ್ ಮತ್ತು ಲಿಕ್ವಿಡ್ ಆಮ್ಲಜನಕ ಬಳಸಿ ನಿರ್ಮಿತ ಕ್ರಯೋಜೆನಿಕ್ ಹಂತವಿತ್ತು. ಒಮ್ಮೆ ಭಾರತಕ್ಕೆ ನಿರಾಕರಿಸಲ್ಪಟ್ಟಿದ್ದ ಈ ತಂತ್ರಾನವನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಕಳೆದ ವರ್ಷ 100&ವಾಟ್ ಆಮ್ಲಜನಕ ಆಧಾರಿತ ಇಂಧನಕೋಶವನ್ನು ಬಾಹ್ಯಾಕಾಶದಲ್ಲಿ ಪ್ರದರ್ಶಿಸಿದ್ದೇವೆ. ಈಗ 20 ಕಿಲೋವಾಟ್ ಆವೃತ್ತಿಯ ಪರೀೆ ನಡೆಯುತ್ತಿದೆ ಎಂದು ಹೇಳಿದರು.
ಹೈಡ್ರೋಜನ್ ಬಸ್ಗಳು, ರೈಲುಗಳು, ವಿಮಾನಗಳು ಹಾಗೂ ಇಂಧನ ಕೋಶಗಳಲ್ಲಿ ಬಳಕೆಯಾಗಬಹುದು. 2010/11ರಲ್ಲಿ ಟಾಟಾ ಮೋಟಾರ್ಸ್ ಜತೆಗೂಡಿ ಇಸ್ರೋ ಹೈಡ್ರೋಜನ್ ಇಂಧನಕೋಶ ಬಸ್ ನಿರ್ಮಿಸಿ ಯಶಸ್ವಿಯಾಗಿ ಪರೀೆ ನಡೆಸಿತು. 2025ರ ಜೂನ್ನಲ್ಲಿ ಐದು ಹೈಡ್ರೋಜನ್ ಬಸ್ಗಳು ವಾಣಿಜ್ಯ ಸೇವೆಗೆ ಪ್ರವೇಶಿಸಿವೆ. ಬಿಎಚ್ಇಎಲ್ ಹಾಗೂ ಎನ್ಟಿಪಿಸಿ ಈಗ ಹೈಡ್ರೋಜನ್ ಗ್ಯಾಸ್ ಟರ್ಬೈನ್ ಇಂಜಿನ್ ವ್ಯವಸ್ಥೆಗಳತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಹೈಡ್ರೋಜನ್ ಜ್ವಾಲೆ ಬಣ್ಣವಿಲ್ಲದಿರುವುದರಿಂದ ಅಪಾಯಕರ. ಹೈಡ್ರೋಜನ್ ಸಂಗ್ರಹಣಾ ಸೌಲಭ್ಯಗಳು ವಿಸ್ತಾರವಾಗುತ್ತಿರುವುದರಿಂದ ಉತ್ತಮ ಸೆನ್ಸರ್ಗಳ ಅವಶ್ಯಕತೆ ಇದೆ. ಪ್ರಸ್ತುತ 3/4 ಸೆಕೆಂಡು ಪ್ರತಿಕ್ರಿಯೆ ನೀಡುವ ಸೆನ್ಸರ್ಗಳ ಬದಲು ಮಿಲಿಸೆಕೆಂಡ್ಮಟ್ಟದ ತಂತ್ರಾನ ಅಗತ್ಯ ಇದರ ಬಗ್ಗೆ ಅಧ್ಯಯನಗಳಾಗ ಬೇಕಿದೆ ಎಂದು ಹೇಳಿದರು.
150ಕ್ಕೂ ಹೆಚ್ಚು ತರು ಭಾಗಿ : ಸಿಐಐಎಸ್ ಕಾರ್ಯದರ್ಶಿ ಪ್ರದಿಪ್ಕುಮಾರ್ ಪಾಂಡೆ ಮಾತನಾಡಿ, 150ಕ್ಕೂ ಹೆಚ್ಚು ತರು ಭಾಗವಹಿಸಿದ್ದು, ದೇಶಾದ್ಯಂತದ ಸಂಶೋಧನಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಸಹಕಾರದಿಂದ ಹೈಡ್ರೋಜನ್ ೇತ್ರದಲ್ಲಿ ಭಾರತದ ಸ್ಥಾನ ಬಲಪಡಿಸಲು ದಾರಿ ತೋರಲಿದೆ ಎಂದರು. ಈ ಕಾರ್ಯಾಗಾರವು "ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್' ಅಡಿಯಲ್ಲಿ ಭಾರತ ಜಾಗತಿಕ ಹೈಡ್ರೋಜನ್ ಕೇಂದ್ರವಾಗಿ ಹೊರಹೊಮ್ಮುವುದಕ್ಕೆ ದಾರಿ ದೀಪವಾಗಿದೆ. ಸಂಶೋಧಕರು, ಮತ್ತು ಕೈಗಾರಿಕಾ ನಾಯಕರಿಗೆ ಹೈಡ್ರೋಜನ್ ತಂತ್ರಾನಗಳ ಸವಾಲು ಹಾಗೂ ಅವಕಾಶಗಳ ಬಗ್ಗೆ ಚರ್ಚಿಸಲು ಇದು ಉತ್ತಮ ವೇದಿಕೆಯಾಯಿತು ಎಂದು ಹೇಳಿದರು.
ಭವಿಷ್ಯ ಈಗಲೇ ಪ್ರಾರಂಭ : ಹೈಡ್ರೋಜನ್ ಶೂನ್ಯ ಕಾರ್ಬನ್ ಹೊರಸೂಸುವಿಕೆಯಿಂದ ಶುದ್ಧ, ಕಾರ್ಯಮ ಮತ್ತು ಬಹುಮುಖಇಂಧನವಾಗಿದ್ದು, ಸ್ಥಿರ ಭವಿಷ್ಯದ ಶಕ್ತಿ ಸಾಗಾಣೆಕೆಯಲ್ಲಿ ಜಾಗತಿಕ ಗಮನ ಸೆಳೆದಿದೆ. ಇದನ್ನು ಭವಿಷ್ಯದ ಇಂಧನವೆಂದು ಕರೆಯುತ್ತಾರೆ, ಆದರೆ ನಿಜವಾಗಿ ಹೇಳಬೇಕಾದರೆ ಭವಿಷ್ಯ ಈಗಲೇ ಪ್ರಾರಂಭವಾಗಿದೆ ಎಂದು ಅಲಯನ್ಸ್ ವಿಶ್ವವಿದ್ಯಾಲಯದ ಪೊ&ಚಾನ್ಸೆಲರ್ ಅಭಯ್ ಜಿ.ಚೆಬ್ಬಿ ಅಭಿಪ್ರಾಯಪಟ್ಟರು.
ಭಾರತವು ನೆಟ್&ಶೂನ್ಯ ಗುರಿ ಸಾಧಿಸಲು ಹೈಡ್ರೋಜನ್ ಆರ್ಥಿಕತೆಯತ್ತ ವೇಗವಾಗಿ ಸಾಗಬೇಕು. ಇಂಧನ ಸಂಗ್ರಹಣೆ, ಮೆಥನಾಲ್ ಆಧಾರಿತ ಪರಿಹಾರಗಳು, 700 ಬಾರ್ಮಟ್ಟದ ಸ್ಟೋರೇಜ್ ವ್ಯವಸ್ಥೆಗಳು ಮತ್ತು ಸ್ವದೇಶಿ ತಂತ್ರಾನ ಅಭಿವೃದ್ಧಿ ಅಗತ್ಯವಾಗಿದೆ. ಇದರ ಬಗ್ಗೆ ಅಧ್ಯಯನ ಮಾಡುವ ಅಗತ್ಯ ಇದೆ. > ಡಾ.ವಿಜಯಕುಮಾರ್ ಸರಸ್ವತ್ ನೀತಿ ಆಯೋಗದ ಗೌರವ ಸದಸ್ಯ ಹಾಗೂ ಸಿಐಐಎಸ್ ಅಧ್ಯ ಹೈಡ್ರೋಜನ್ ಸಂಶೋಧನೆಯ ಅಗತ್ಯವನ್ನು ವಿವರಿಸುತ್ತ ಹೈಡ್ರೋಜನ್ ಕೇವಲ ಮೂಲಧಾತುವಲ್ಲ. ಇದು ಉತ್ಕಟಕ, ಇಂಧನ ಹಾಗೂ ನವೀಕರಿಸಬಹುದಾದ ಶಕ್ತಿ ಹಾಗೂ ಜ್ವಲನೀಯ ಇಂಧನಗಳ ನಡುವಿನ ಸೇತುವೆ. > ಡಾ.ಎನ್.ಕಲೈಸೆಲ್ವಿ ಸಿಎಸ್ಐಆರ್ ಮಹಾನಿರ್ದೇಶಕಿ