ಪರಿಸರ ಸ್ನೇಹಿ ದೀಪಾವಳಿಗೆ ಪ್ರತಿಜ್ಞೆ

12-pnp 3
Published on


ಪಾಂಡವಪುರ: ಪರಿಸರ ಸ್ನೇಹಿ ಪಟಾಕಿ ಸಿಡಿಸುವ ಮೂಲಕ ಮಾಲಿನ್ಯ ಮುಕ್ತ ದೀಪಾವಳಿ ಆಚರಿಸುವಂತೆ ಸಾರ್ವಜನಿಕರಿಗೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಜಾಗೃತಿ ಮೂಡಿಸಿದರು. ಪರಿಸರ ಇಂಜಿನಿಯರ್ ಶಫೀನಾಜ್ ಮಾತನಾಡಿ, ಸಾರ್ವಜನಿಕರು ಮಣ್ಣಿನ ಹಣತೆ ಹಚ್ಚುವ ಮೂಲಕ ದೀಪಾವಳಿ ಆಚರಿಸ ಬೇಕು. ನಿಷೇಧಿತ ಪಟಾಕಿಗಳನ್ನು ಸಿಡಿಸುವ ದುಸ್ಸಾಹಸಕ್ಕೆ ಮುಂದಾಗಬಾರದು. ಚಿಕ್ಕಮಕ್ಕಳು ಪಟಾಕಿಯಿಂದ ದೂರವಿರುವಂತೆ ಪಾಲಕರು ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಾಡುವ ಪ್ರಮಾಣ ಪತ್ರ ವಿತರಿಸಲಾ ಯಿತು. ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ನೆರೆದಿದ್ದವರ ಸಹಿ ಸಂಗ್ರಹ ಮಾಡಿಕೊಳ್ಳಲಾಯಿತು. ಪುರಸಭೆ ಮುಖ್ಯಾಧಿಕಾರಿ ವೀಣಾ, ಇಂಜಿನಿಯರ್ ಚೌಡಪ್ಪ, ಯಶಸ್ವಿನಿ, ಸಿಬ್ಬಂದಿ ಲಕ್ಷ್ಮೀನಾರಾಯಣ, ಕೃಷ್ಣ, ಮಧು, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net