ಸರ್ಕಾರಿ ಶಾಲೆಗಳಿಗೆ ಗ್ರೀನ್ ಬೋರ್ಡ್ ಕೊಡುಗೆ

2023dec23skp04
Published on

ಸಕಲೇಶಪುರ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ಬಸ್ಸು ನಿಲ್ದಾಣ, ಸರ್ಕಾರಿ ಶಾಲೆಗಳಿಗೆ ಗ್ರೀನ್ ಬೋರ್ಡ್, ಪೀಠೋಪಕರಣಗಳು ಸೇರಿದಂತೆ ಸರ್ಕಾರ ಮಾಡಬೇಕಾದ ಕೆಲಸಗಳನ್ನು ಸಕಲೇಶಪುರ ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಇಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಯೂರೋಪಿನ್ ಹಾಗೂ ರೋಟರಿ ಸಂಸ್ಥೆ ವತಿಯಿಂದ ನೀಡಿರುವ 50 ಗ್ರೀನ್ ಬೋರ್ಡ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೋಟರಿ, ಲಯನ್ಸ್, ಜೆಸಿಯಂತಹ ಸಮಾಜ ಸೇವಾ ಸಂಸ್ಥೆಗಳು ಪ್ರಾಮಾಣಿಕವಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಗೃಹ, ಕುಳಿತುಕೊಳ್ಳುವುದಕ್ಕೆ ಪೀಟೋಪಕರಣಗಳು, ಬೋರ್ಡ್‌ಗಳು, ಸರಿಯಾದ ಕಟ್ಟಡಗಳೇ ಇಲ್ಲದೆ ಇರುವುದು ಹಲವು ಶಾಲೆಗಳಲ್ಲಿ ಕಂಡು ಬಂದಿದೆ. ಇಂತಹ ಶಾಲೆಗಳನ್ನು ಗುರುತಿಸಿ ರೋಟರಿ ಸಂಸ್ಥೆ ಕೈ ತೊಳೆಯುವ ಬೇಸೆನ್, ಮೇಜುಗಳು, ಸೈನ್ ಬೋರ್ಡ್‌ಗಳನ್ನು ನೀಡುವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುತ್ತಿವೆ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ಎಸ್.ಎಂ.ಸದಾಶಿವ, ಕಾರ್ಯದರ್ಶಿ ಎಸ್.ಎನ್. ಅವಿನಾಶ್, ಮಾಜಿ ಅಧ್ಯಕ್ಷ ಸಹನಾ ಶಶಿಧರ್, ಎಚ್.ಆರ್. ಸುರೇಶ್, ಜಾನೇಕೆರೆ ಆರ್. ಪರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net