

ಪಡುಬಿದ್ರಿ: ಯೋಗ ಪ್ರತಿಯೊಬ್ಬರಿಗೂ ಬೇಕಾದ ಅತ್ಯುತ್ತಮ ಭಾರತೀಯ ಶಾಸ್ತ್ರವಾಗಿದೆ. ದಿನ ನಿತ್ಯ ಯೋಗಾಸನ ಮತ್ತು ಪ್ರಾಣಾಯಾಮ ವಾಡುತ್ತಿದ್ದರೆ ಸದೃಢ ದೇಹ ಹಾಗೂ ಸುಸ್ಥಿರ ಆರೋಗ್ಯ ಮತ್ತು ನೆಮ್ಮದಿ ಉಂಟಾಗುತ್ತದೆ. ಮಕ್ಕಳಲ್ಲಿ ಕಲಿಕೆಯ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ ಉಡುಪಿ ಜಿಲ್ಲಾ ಕಾರ್ಯದರ್ಶಿ ರಂಜಿತ್.ಕೆ.ಎಸ್ ಹೇಳಿದರು.
ಅದವಾರು ಪೂರ್ಣಪ್ರಜ್ಞ ಎನ್ನೆಸ್ಸೆಸ್ ಟಕ ಹಾಗೂ ಉಡುಪಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಜಂಟಿ ಆಶ್ರಯದಲ್ಲಿ ಅದವಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದವಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ. ನಿತ್ಯಾನಂದ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ, ಪೂರ್ಣಪ್ರಜ್ಞ ಕನ್ನಡ ವಾಧ್ಯಮ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಪ್ರತಿವಾ ಭಟ್, ಅಂಗ್ಲ ವಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜುನಾಥ್ ಎ.ವಿ. ಉಪಸ್ಥಿತರಿದ್ದರು. ಪ್ರತಿಕ್ಷಾ ಸ್ವಾಗತಿಸಿ, ದರ್ಶಿತ್ ಶೆಟ್ಟಿ ವಂದಿಸಿದರು. ನಿತ್ಯಶ್ರೀ ನಿರೂಪಿಸಿದರು.