

ಬೇಲೂರು: ಕರೊನಾ ಸೋಂಕು ನಿಯಂತ್ರಣಕ್ಕಾಗಿ ತಾಲೂಕು ಆಡಳಿತ ಕರೆ ನೀಡಿರುವ ಲಾಕ್‌ಡೌನ್‌ಗೆ ಬೇಲೂರು ಭಾಗದಲ್ಲಿ ಉತ್ತಮ ಬೆಂಬಲ ಸಿಕ್ಕಿದೆ. ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆ ನಂತರ ಯಾವುದೇ ವ್ಯಾಪಾರ ವಹಿವಾಟವಾಗದೆ ಸಂಪೂರ್ಣ ಬಂದ್ ಹಾಗಿತ್ತು. ಬೆಳಗ್ಗೆಯಿಂದ ವಹಿವಾಟು ನಡೆಸಿದ ವರ್ತಕರು ಮಧ್ಯಾಹ್ನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ಬೆರಳೆಣಿಕೆಯಷ್ಟು ಜನರು ಹಾಗೂ ವಾಹನಗಳು ಮಾತ್ರ ಓಡಾಡುತ್ತಿತ್ತು. ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್‌ಗಳನ್ನು ತೆರೆಯಲಾಗಿತ್ತು. ಪೊಲೀಸರು ಗಸ್ತು ತಿರುಗಿ ಮುನ್ನೆಚ್ಚರಿಕೆ ವಹಿಸಿದ್ದರು.