ಮಹಾನೀಯರ ಪುತ್ಥಳಿ ಸ್ಥಾಪಿಸಲಿ

14HBHALLI 01
ಹಗರಿಬೊಮ್ಮನಹಳ್ಳಿಯಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಕಾಮಗಾರಿಗೆ ಶಾಸಕ ಕೆ.ನೇಮರಾಜನಾಯ್ಕ ಚಾಲನೆ ನೀಡಿದರು. ತಹಸೀಲ್ದಾರ್ ಆರ್.ಕವಿತಾ, ತಾ.ಪಂ.ಇಒ ಡಾ.ಪರಮೇಶ್ವರಪ್ಪ. ಬಿಇಒ ಮೈಲೇಶ್ ಬೇವೂರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆನಂದ ಡೊಳ್ಳಿನ್, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರ ಬಸ್ ತಂಗುದಾಣ ವೃತ್ತದ ಬಳಿ ಸುಮಾರು 50 ಲಕ್ಷ ರೂ. ವೆಚ್ಚದ ಡಾ.ಬಿ.ಅರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಪ್ರತಿಷ್ಠಾಪನೆಗೆ ಶಾಸಕ ಕೆ.ನೇಮಿರಾಜ ನಾಯ್ಕ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಪಟ್ಟಣದಲ್ಲಿ ವಿವಿಧ ಸಮುದಾಯಗಳ ನಾಯಕರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗುವುದು. ಡಾ.ಬಿ.ಅರ್.ಅಂಬೇಡ್ಕರ್ ಅವರ ಪುತ್ಥಳಿ ಎಂದೋ ಸ್ಥಾಪನೆಯಾಗಬೇಕಿತ್ತು. ಆದರೆ, ಆಡಳಿತ ನಡೆಸಿದವರ ಅಸಡ್ಡೆ ಮತ್ತು ನಿರ್ಲಕ್ಷ ್ಯದಿಂದಲೇ ವಿಳಂಬವಾಗಿದೆ ಎಂದರು.

ನಂತರ ಹಳೇ ತಾಲೂಕು ಕಚೇರಿ ಆವರಣದಿಂದ ಡಾ.ಬಿ.ಅರ್.ಅಂಬೇಡ್ಕರ್ ಹಾಗೂ ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ಹಾಗೂ ತಹಸೀಲ್ದಾರ್ ಆರ್.ಕವಿತಾ ಚಾಲನೆ ನೀಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ್, ಪುರಸಭೆ ಸದಸ್ಯರಾದ ನಾಗರಾಜ ಜನ್ನು, ಬಣಕಾರ ಸುರೇಶ್, ದೀಪಕ್ ಕಟಾರೆ, ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಪ್ರಮುಖರಾದ ಮರಿಯಪ್ಪ, ಪೂಜಪ್ಪ, ಅಲಬೂರು ಗಣೇಶ, ಲೋಕಪ್ಪ, ಮಹೇಶ, ನಾಗರಾಜ, ಕನ್ನಿಹಳ್ಳಿ ಚಂದ್ರಶೇಖರ್, ಜಗದೀಶ್ ಜಿ.ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net