ಭಕ್ತರ ಕಣ್ಣು ತೆರೆಸಿದ ಮಹಾ ಸಂತ

Great saint who opened the eyes of devotees
ಬನಹಟ್ಟಿಯಲ್ಲಿ ಸಿದ್ಧಾರೂಢರ ಜಯಂತಿ ಅಂಗವಾಗಿ ಹಮ್ಮಿಕೊಂಡ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
Published on

ರಬಕವಿ/ಬನಹಟ್ಟಿ: ಸರಳ ಜೀವನ ಹಾಗೂ ಬೋಧನೆಯಿಂದ ಅಪಾರ ಭಕ್ತ ಸಮೂಹವನ್ನು ಒಳಗೊಂಡಿದ್ದ ಸಿದ್ಧಾರೂಢರು ಪವಾಡ ಪುರುಷರಾಗಿದ್ದರು. ಅವರನ್ನು ನೆನೆದರೆ ಬದುಕು ಬಂಗಾರವಾಗುತ್ತದೆ ಎಂದು ಬನಹಹಟ್ಟಿ ಸಿದ್ಧಾರೂಢ ಮಠದ ರಾಜು ಬೀಳಗಿ ಹೇಳಿದರು.

ಬನಹಟ್ಟಿಯಲ್ಲಿ ಸಿದ್ಧಾರೂಢರ ಜಯಂತಿ ಅಂಗವಾಗಿ ಭಾನುವಾರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ಧಾರೂಢರು ನುಡಿದಂತೆ ನಡೆದು ಲಕ್ಷಾಂತರ ಭಕ್ತರ ಕಣ್ಣು ತೆರೆಸಿದ ಮಹಾ ಸಂತರಾಗಿದ್ದಾರೆ ಎಂದು ಹುಬ್ಬಳ್ಳಿಯ ಸಿದ್ಧಾರೂಢರ ಆಚಾರ-ವಿಚಾರ, ಭಕ್ತಿ-ಭಾವದ ಕುರಿತು ವಿವರಿಸಿದರು.

ಬೆಳಗ್ಗೆ ಶ್ರೀಮಠದಲ್ಲಿ ಅವರ ಮೂರ್ತಿಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜತೆಗೆ ದಾಸಿಮಯ್ಯ ಹಾಗೂ ರಾಮಾರೂಢ ಭಾವಚಿತ್ರದ ಮೆರವಣಿಗೆ ಜರುಗಿತು. ಮಹಿಳೆಯರು ಆರತಿ, ಕುಂಭ ಹಾಗೂ ವೀರಗಾಸೆಯೊಂದಿಗೆ ನಡೆದ ಮೆರವಣಿಗೆ ಗಮನ ಸೆಳೆಯಿತು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ರಮೇಶ ಕೊಣ್ಣೂರ, ಶಂಕರ ಹನಗಂಡಿ, ದಾನಪ್ಪ ಕೊಣ್ಣೂರ, ಬಸವರಾಜ ಅಥಣಿ, ರಮೇಶ ಸೋರಗಾಂವಿ, ರಾಜು ಪಿಟಗಿ, ಸೋಮನಾಥ ಅಭಕಾರ, ಶೀವು ಬಳುಲಗಿಡದ, ಸುರೇಶ ಬೀಳಗಿ, ಕಲ್ಲಪ್ಪ ಪತ್ತಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net