`ಗೃಹಜ್ಯೋತಿ' ಯೋಜನೆಗೆ ಭರ್ಜರಿ ಪ್ರತಿಕ್ರಿಯೆ

web 2
Published on

ಮಂಜುನಾಥ ಅಂಗಡಿ ಧಾರವಾಡ
ಚುನಾವಣೆಗೂ ಮೊದಲು ಕಾಂಗ್ರೆಸ್ ಘೋಷಿಸಿದ್ದ ಗೃಹಜ್ಯೋತಿ' ಯೋಜನೆಗೆ ನೋಂದಣಿ ಆರಂಭಗೊAಡಿದೆ. ಜೂ. ೧೮ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ೧೨,೯೨,೧೭೬ ಹೆಚ್ಚು ಜನ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ೫ ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಪೈಕಿ ಮೊದಲ ಗ್ಯಾರಂಟಿಗೃಹಜ್ಯೋತಿ' ಯೋಜನೆ. ಇದರ ಅಡಿ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಘೋಷಿಸಲಾಗಿತ್ತು. ಯೋಜನೆಯ ಲಾಭ ಪಡೆಯಲು ಉತ್ಸುಕರಾಗಿರುವ ವಿದ್ಯುತ್ ಗ್ರಾಹಕರು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ.
ಜೂ. ೧೮ರಿಂದ ಗೃಹಜ್ಯೋತಿ ನೋಂದಣಿ ಆರಂಭಗೊAಡಿದ್ದು, ಮೊದಲ ದಿನವೇ ೧೩,೬೦೫ ಜನ ನೋಂದಣಿ ಮಾಡಿಕೊಂಡಿದ್ದರು. ದಿನದಿಂದ ದಿನಕ್ಕೆ ನೋಂದಣಿ ಸಂಖ್ಯೆ ದುಪ್ಪಟ್ಟಾಗುತ್ತ ಸಾಗಿದ್ದು, ೨೪ರಂದು ೨,೪೭,೨೭೭ ಜನ ನೋಂದಾಯಿಸಿದ್ದಾರೆ. ಇದುವರೆಗೆ ಹೆಸ್ಕಾಂಗೆ ೧೨.೯೨ ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಯೋಜನೆಗೆ ನೋಂದಣಿ ಮಾಡಿಕೊಳ್ಳುವುದನ್ನು ಸರಳೀಕರಿಲಾಗಿದೆ. ಖಾಸಗಿ ನೆಟ್ ಸೆಂಟರ್‌ಗಳು, ಗ್ರಾಮ ಒನ್, ಹು-ಧಾ ಒನ್ ಕೇಂದ್ರಗಳಿಗೆ ಪ್ರತ್ಯೇಕ ಲಿಂಕ್ ನೀಡಲಾಗಿದೆ. ಆರಂಭದಲ್ಲಿ ಸರ್ವರ್ ಸಮಸ್ಯೆ ಎದುರಾಗಿತ್ತಾದರೂ ಸದ್ಯ ೨- ೩ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಖಾಸಗಿ ನೆಟ್ ಸೆಂಟರ್‌ಗಳ ಮೇಲೆ ಯಾರ ಹಿಡಿತವೂ ಇಲ್ಲದಿರುವುದರಿಂದ ಕೆಲವರು ೪೦- ೫೦ ರೂ. ಶುಲ್ಕ ನಿಗದಿಪಡಿಸಿದ್ದಾರೆ.

ಗ್ರಾ.ಪಂ.ಗಳಿಗೆ ಮುಗಿಬಿದ್ದ ಜನ:
ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ನೋಂದಣಿಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಪ್ರತ್ಯೇಕ ಲಿಂಕ್ ಇದ್ದು, ಕಂಪ್ಯೂಟರ್ ಆಪರೇಟರ್‌ಗಳಿಗೆ ಮತ್ತೊಂದು ಜವಾಬ್ದಾರಿ ವಹಿಸಲಾಗಿದೆ. ಜನಸಂದಣಿ ಕಡಿಮೆ ಮಾಡಲು ಮತ್ತು ತ್ವರಿತ ನೋಂದಣಿಗಾಗಿ ಆಪರೇಟರ್‌ಗಳಿಗೆ ಪ್ರತ್ಯೇಕ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗಿದೆ. ಗ್ರಾಹಕರ ಹಿಂದಿನ ತಿಂಗಳ ವಿದ್ಯುತ್ ಬಿಲ್, ಆಧಾರ್ ಸಂಖ್ಯೆ ನಮೂದಿಸಿ ಯೋಜನೆಗೆ ನೋಂದಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net