ಕೋತಂಬರಿಗೆ ಮಹಾ ಬೆಲೆ

2-gdg-5
Published on

ಬೆಳವಣಿಕಿ(ರೋಣ): ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಈ ಭಾಗದ ಸೊಪ್ಪಿಗೆ ಡಿಮಾಂಡ್ ಹೆಚ್ಚಿದೆ.
ಬೆಳವಣಿಕಿ ಸುತ್ತಲಿನ ಹಳ್ಳಿಗಳಾದ ಮಲ್ಲಾಪೂರ, ಸಂದಿಗವಾಡ, ಕೌಜಗೇರಿ, ಹೊನ್ನಾಪೂರ, ಅರಹುಣಶಿ, ಮೇಲ್ಮಠ, ಸವಡಿ, ಯಾವಗಲ್ಲ, ಯಾ.ಸ. ಹಡಗಲಿ ಮತ್ತಿತರರ ಗ್ರಾಮಗಳಲ್ಲಿ ಬೆಳೆದ ಕೋತಂಬರಿ ಸೊಪ್ಪಿಗೆ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ ಬಂದಿದೆ.
ಇಲ್ಲಿ ಬೆಳೆದ ಕೋತಂಬರಿ ಸೊಪ್ಪನ್ನು ಬೆಳಗಾವಿ, ಮುಂಬೈ, ಸಾಂಗ್ಲಿ, ಪುಣೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಖರೀದಿಸುತ್ತಿದ್ದು, ಇದರಿಂದ ಕೊತಂಬರಿ ಸೊಪು್ಪ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಮಹಾರಾಷ್ಟ್ರದಲ್ಲಿ ಕೊತಂಬರಿ ಹೆಚ್ಚು ಬೆಳೆಯುವ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ ಬೆಳೆ ಹಾನಿಯಾಗಿದೆ. ಹೀಗಾಗಿ ಅಲ್ಲಿನ ವ್ಯಾಪಾರಿಗಳು ಕೊತಂಬರಿ ಸೊಪ್ಪಿಗಾಗಿ ರಾಜ್ಯದ ಕಡೆ ಅದರಲ್ಲಿಯೂ ಮುಖ್ಯವಾಗಿ ಬೆಳವಣಿಕಿ ಸುತ್ತಮುತ್ತಲಿನ ಗ್ರಾಮಗಳ ಕಡೆ ಮುಖ ಮಾಡಿದ್ದಾರೆ.
1 ಟ್ರೇಗೆ 25ರಿಂದ 30 ಸಿವುಡುಗಳಿದ್ದು, 150ರಿಂದ 180ರೂ. ವರೆಗೆ ಮಾರಾಟವಾಗುತ್ತಿತ್ತು. ಇದೀಗ ಟ್ರೇ ಒಂದಕ್ಕೆ 300ರಿಂದ 350ರೂ. ವರೆಗೆ ಹರಾಜು ಆಗುತ್ತಿವೆ.
ರೋಣ ತಾಲೂಕಿನ ಬೆಳವಣಿಕಿ, ಸಂದಿಗವಾಡ, ಕೌಜಗೇರಿ, ಮಲ್ಲಾಪೂರ, ಯಾಸ ಹಡಗಲಿ, ಬಾಸಲಾಪೂರ ಮತ್ತಿತರ ಗ್ರಾಮಗಳಲ್ಲಿ ಕೊತಂಬರಿ ಸೊಪು್ಪ ಬೆಳೆಯಲಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚು ಪ್ರದೇಶದಲ್ಲಿ ಕೊತಂಬರಿ ಬೆಳೆಯಲಾಗುತ್ತಿದೆ.
ರೋಣ ತಾಲೂಕಿನ ಬೆಳವಣಿಕಿ ಮತ್ತಿತರ ಕಡೆಗೆ ಬೆಳೆಯಲಾದ ಕೊತಂಬರಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಭಾರಿ ಬೇಡಿಕೆ ಇದ್ದು, ಕಳೆದ ವಾರದಿಂದ ದಲಾಲರು ಗ್ರಾಮದಲ್ಲಿ ಬೀಡುಬಿಟ್ಟು ಕೊತಂಬರಿ ಖರೀದಿ ಆರಂಭಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರಂ, ಕರ್ನಲ, ನಂದ್ಯಾಲ, ತಿರುಪತಿ, ಕಡಪಾ ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬೆಳೆದ ಕೊತಂಬರಿ ಸೊಪ್ಪಿಗೆ ಬೇಡಿಕೆ ಇದೆ. ದಿನಕ್ಕೆ 10ರಿಂದ 12 ಮಿನಿ ಲಾರಿಗಳಲ್ಲಿ ಕೊತಂಬರಿ ಸೊಪ್ಪನ್ನು ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದೆ. ಒಂದು ವಾರದಿಂದ ನಿತ್ಯ ಸೊಪು್ಪ ಸಾಗಾಟ ಆಗುತ್ತಿದೆ. ಒಂದು ಎಕರೆ ಕೊತಂಬರಿ ಸೊಪ್ಪು 10ರಿಂದ 14 ಸಾವಿರ ರೂ. ಗೆ ಮಾರಾಟ ಮಾಡಲಾಗುತ್ತಿದೆ. ಕೊತಂಬರಿ ಮೂಲಕವಾದರೂ ಈ ವರ್ಷ ಕೊಂಚ ಲಾಭ ಕಂಡುಕೊಂಡಿರುವುದು ಖುಷಿ ತಂದಿದೆ ಎಂದು ರೈತರು ವರ್ಷ ವ್ಯಕ್ತಪಡಿಸುತ್ತಿದ್ದಾರೆ.

ಒಂದು ದಿನಕ್ಕೆ 10 ರಿಂದ 12 ಕ್ಯಾಂಟರ್ ಗಾಡಿಯಲ್ಲಿ ಕೊತಂಬರಿ ಕಳಿಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಕೊತಂಬರಿ ಖರೀದಿ ಆರಂಭಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಕೊತಂಬರಿ ಪ್ರದೇಶ ಹಾಳಾಗಿದ್ದರಿಂದ ಇಲ್ಲಿನ ರೈತರಿಗೆ ಅನುಕೂಲವಾಗಿದೆ.| ಎಂ.ಬಿ. ದಸ್ತಗಿರಿ, ಎಂ. ಕಿಲ್ಲೇದಾರಕೊತಂಬರಿ ಖರೀದಿದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net