ಶಾಂತಿ ಸಂದೇಶ ಸಾರಿದ ಮಹಾಪುರುಷರು

Great men who spread the message of peace
Great men who spread the message of peace
Published on

ಬಾದಾಮಿ: ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ದಿವ್ಯವಾಣಿಯ ಮೂಲಕ ಶಾಂತಿ ಸಂದೇಶ ಸಾರಿದ ರೇಣುಕಾಚಾರ್ಯರು ಮಹಾಪುರುಷರು ಎಂದು ಜಂಗಮ ಸಮಾಜದ ತಾಲೂಕಾಧ್ಯಕ್ಷ ಶಿವುಕುಮಾರ ಹಿರೇಮಠ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಕುಲದ ಉದ್ಧಾರಕ್ಕಾಗಿ ಹಲವು ಆಚಾರ್ಯರು, ಪ್ರವಾದಿಗಳು, ಸಂತರು ಭೂಮಿ ಮೇಲೆ ಅವತರಿಸಿದ್ದಾರೆ. ಅಂತಹ ಪರಂಪರೆಯಲ್ಲಿ ಅವತರಿಸಿದ್ದ ಆದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು ಪರಶಿವನ ಆದೇಶದಂತೆ ಶಕ್ತಿ ವಿಶಿಷ್ಟದ್ವೈತ ಸಿದ್ಧಾಂತ ಪ್ರಚುರಪಡಿಸಿ ವೀರಶೈವ ಧರ್ಮವನ್ನು ನೆಲೆಗೊಳಿಸದ್ದಾರೆ ಎಂದರು.

ತಹಸೀಲ್ದಾರ್ ಮಧುರಾಜ, ವಿದ್ಯಾನಂದ ಜಾಧವ, ಸಮಾಜದ ಅಧ್ಯಕ್ಷ ಶಿವುಕುಮಾರ ಹಿರೇಮಠ, ಎಸ್.ಎಂ. ಹಿರೇಮಠ, ಹೊನ್ನಯ್ಯ ಹಿರೇಮಠ, ಗುರುಸಿದ್ದಯ್ಯ ಹಿರೇಮಠ, ಶೇಖಣ್ಣ ಹಂಗರಗಿ, ಕಾರ್ಯದರ್ಶಿ ಕುಮಾರ ಹಿರೇಮಠ, ಶಿವಯ್ಯ ಹಿರೇಮಠ, ದೊಡ್ಡಯ್ಯ ಭೂಸನೂರಮಠ, ಮಲ್ಲಯ್ಯ ಮುಪ್ಪಿನನ್ನವರ, ಉಮೇಶ ಭಿಕ್ಷಾವತಿಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net