ಭರದಿಂದ ಸಾಗಿದೆ ಅಭಿವೃದ್ಧಿ

28Ravig19-Web
ಬೆಳಗಾವಿಯಲ್ಲಿ ನಿರ್ಮಿಸಲಾದ ಮಹಿಳಾ ಬಜಾರ್ ಮತ್ತು ತಿನಿಸು ಮಾರುಕಟ್ಟೆಯನ್ನು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ, ಶಶಿಕಾಂತ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಬೆಳಗಾವಿ ನಗರ ಇದೀಗ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ 50 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಈಗ ಆಗುತ್ತಿವೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಗ್ನಿಶಾಮಕ ದಳ ಕಚೇರಿ ಬಳಿಯ ವಾಜಪೇಯಿ ಮಾರ್ಗದಲ್ಲಿ ಬಸವೇಶ್ವರ ವೃತ್ತದ ಸಮೀಪ ನಿರ್ಮಿಸಿರುವ ಚನ್ನಭೈರಾದೇವಿ ಹೆಸರಿನ ಮಹಿಳಾ ಬಜಾರ್ ಮತ್ತು ತಿನಿಸು ಮಾರುಕಟ್ಟೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಚನ್ನಭೈರಾದೇವಿಯನ್ನು ಪರಿಚಯಿಸುವ ಅವಶ್ಯಕತೆ ಇತ್ತು. ಪ್ರಚಾರದ ಕೊರತೆಯಿಂದ ನಮಗೆ ಪರಿಚಯವಾಗದ ಕರ್ನಾಟಕದ ಮಹಾರಾಣಿ ಅವಳು. ಅವಳ ಹೆಸರಿನಲ್ಲಿ ಮಾರುಕಟ್ಟೆ ತೆರೆದಿರುವುದು ಹಾಗೂ ಸ್ವಚ್ಛ ಪರಿಸರದಲ್ಲಿ ತಿಂಡಿ-ತಿನಿಸು ಮಾರಾಟಕ್ಕೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು. ಶಾಸಕ ಅಭಯ ಪಾಟೀಲ, ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಸೇರಿದಂತೆ ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net