

ಮಡಿಕೇರಿ:
ಕ್ರೀಡಾ ತವರು ಕೊಡಗಿನಲ್ಲಿ ಹಾಕಿ ಎಂದ ಕೂಡಲೇ ಸೋವಾರಪೇಟೆ ನೆನಪಿಗೆ ಬರುತ್ತದೆ. ಇಲ್ಲಿ ಹಾಕಿ ಆಟಗಾರರು ದೊಡ್ಡ ಪ್ರಮಾಣದಲ್ಲಿ ಇದ್ದು, ಊರು ತುಂಬಾ ಹಾಕಿ ಅಭಿಮಾನಿಗಳೇ ತುಂಬಿದ್ದಾರೆ. ಇಂಥ ಸ್ಥಳದಲ್ಲಿ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ನಡೆಯುತ್ತದೆ ಎಂದಾಗ ಸಹಜವಾಗಿ ಸ್ಥಳೀಯರು ಕಾತುರದಿಂದ ಕಾಯುವಂತಾಗಿತ್ತು. ಅದರಲ್ಲೂ ಕರ್ನಾಟಕದ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕುತೂಹಲದಿಂದ ಎದುರು ನೋಡುತ್ತಿದ್ದರು.
ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಿದ್ದರೂ ಮಧ್ಯಾಹ್ನ ನಂತರದ ಕರ್ನಾಟಕ ಮತ್ತು ಚಂಡೀಗಢ ನಡುವಿನ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿ ಅಭಿಮಾನಿಗಳು ಧಾವಿಸಿ ಬಂದರು. ನಿಗದಿಗಿಂತ ಸುಮಾರು 1 ಗಂಟೆ ತಡವಾಗಿ ಈ ಪಂದ್ಯ ಆರಂಭವಾಗುತ್ತಿದ್ದAತೆಯೇ ಗ್ಯಾಲರಿ ಭರ್ತಿ ಆಗಿ ಅಕ್ಕ-ಪಕ್ಕದ ಜಾಗದಲೆಲ್ಲಾ ಕುಳಿತು, ನಿಂತು ತವರಿನ ತಂಡವನ್ನು ಹುರಿದುಂಬಿಸಿದರು.
ಆರಂಭದಲ್ಲಿ ಕರ್ನಾಟಕ ತಂಡ ಸ್ವಲ್ಪ ಬಲಾಢ್ಯ ಅನ್ನಿಸಿದರೂ ಚಂಡೀಗಢ ತಂಡದ ಸಂಘಟಿತ ಹೋರಾಟದ ಮಧ್ಯೆ ಅಷ್ಟೇನೂ ಉತ್ತಮ ಪ್ರದರ್ಶನ ಬರಲಿಲ್ಲ. ಆದರೂ ಪ್ರಥಮಾರ್ಧದಲ್ಲಿ ಕರ್ನಾಟಕ ಪರ ಒಂದು ಗೋಲು ದಾಖಲಾಗುತ್ತಿದ್ದಂತೆಯೇ ಮೈದಾನದಲ್ಲಿ ತುಂಬಿದ್ದ ಕರ್ನಾಟಕ ತಂಡದ ಅಭಿಮಾನಿಗಳು ಹುರುಪಿನಿಂದ ಕೂಗತೊಡಗಿದರು. ಆದರೆ ಈ ಜೋಶ್ ತುಂಬಾ ಹೊತ್ತು ಇರಲಿಲ್ಲ. ಚಂಡೀಗಢ ತಂಡ ಮೇಲಿನಿಂದ ಮೇಲೆ 3 ಗೋಲು ದಾಖಲಿಸುತ್ತಿದ್ದಂತೆಯೇ ಮೈದಾನ ಸ್ತಬ್ಧವಾಯಿತು.
ದ್ವಿತೀಯಾರ್ಧ ಆರಂಭವಾಗುತ್ತಿದ್ದAತೆಯೇ ಮೈದಾನದಲ್ಲಿ ಚಂಡೀಗಢ ಪ್ರಾಬಲ್ಯ ಮೆರೆಯಲು ಆರಂಭಿಸಿತು. ಸಂಪೂರ್ಣ ಪಂದ್ಯ ಚಂಡೀಗಢ ಹಿಡಿತದಲ್ಲಿ ಇರುವಂತೆ ಕಂಡುಬAತು. ಕರ್ನಾಟಕದ ಆಟಗಾರರನ್ನು ಪೂರ್ತಿಯಾಗಿ ಹತೋಟಿಗೆ ತೆಗೆದುಕೊಂಡ ಚಂಡೀಗಢದ ಬಾಲಕಿಯರು ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸುಲಭವಾಗಿ ಗೋಲ್ ಆಗಿ ಪರಿವರ್ತಿಸಿಕೊಂಡು ಮುನ್ನಡೆ ಸಾಧಿಸಿದರು.
ಕರ್ನಾಟಕ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕಿದರೂ ಒಂದು ಮಾತ್ರ ಗೋಲ್ ಆಗಿ ಪರಿವರ್ತನೆ ಆಯಿತು. ಚಂಡೀಗಢದ ಸದೃಢ ಬಾಲಕಿಯರ ಎದುರು ಕರ್ನಾಟಕದ ಆಟಗಾರರು ಪ್ರಬಲ ಪೈಪೋಟಿ ನೀಡಲು ಪ್ರಯತ್ನಿಸಿದರಾದರೂ ಗೆಲುವು ಕೈ ಹಿಡಿಯಲಿಲ್ಲ. ಬಹುತೇ ಕೊಡಗಿನ ಆಟಗಾರರರೇ ಇದ್ದ ಕರ್ನಾಟಕ ತಂಡಕ್ಕೆ ತವರಿನ ಅಭಿಮಾನಿಗಳ ಬೆಂಬಲ ಇದ್ದರೂ ಇಲ್ಲಿನವರ ದೊಡ್ಡ ನಿರೀಕ್ಷೆ ಒತ್ತಡ ಮೂಡಿಸಿದಂತೆ ಕಂಡುಬತು. ಕೊನೆಗೆ ಚಂಡೀಗಢದ ಎದುರು 8-2 ಗೋಲುಗಳಿಂದ ಪಂದ್ಯ ಕೈ ಚೆಲ್ಲುವಂತಾಯಿತು.
ಭಾರೀ ನಿರೀಕ್ಷೆಯಲ್ಲಿ ಆಗಮಿಸಿದ್ದ ಸ್ಥಳೀಯ ಅಭಿಮಾನಿಗಳು ‘ಬೆಸ್ಟ್ ಲಕ್ ನೆಕ್ಸ್÷್ಟ ಟೈಂ’ ಎಂದು ಕರ್ನಾಟಕ ತಂಡಕ್ಕೆ ಹಾರೈಸುತ್ತಾ ಭಾನುವಾರದ ಸೆಮಿಫೈನಲ್ ಕಡೆ ದೃಷ್ಟಿ ನೆಟ್ಟಿದ್ದಾರೆ.