ವಿಶ್ವಕರ್ಮರಿಂದ ಅಪಾರ ಕೊಡುಗೆ

rbk 11-1vishwa
ಬನಹಟ್ಟಿಯ ವಿಶ್ವಕರ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ವಿಶ್ವ ಕರ್ಮ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಭಾಗವಹಿಸಿದ್ದರು.
Published on

ರಬಕವಿ/ಬನಹಟ್ಟಿ: ವಿಶ್ವ ಕರ್ಮರು ಕೇವಲ ಸಮಾಜಕ್ಕಷ್ಟೇ ಅಲ್ಲದೆ ಇಡಿ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದವರಾಗಿದ್ದಾರೆ ಎಂದು ವಿಶ್ವ ಕರ್ಮ ಜಗದ್ಗುರು ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಮಹಾಸಂಸ್ಥಾನಮಠದ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಹೇಳಿದರು.

ಬನಹಟ್ಟಿ ನಗರದಲ್ಲಿ ವಿಶ್ವ ಕರ್ಮ ಜಾತ್ರಾ ಮಹೋತ್ಸವ, ನೂತನ ಗೋಪುರ ಉದ್ಘಾಟನೆ, ಕಲಶಾರೋಹಣ ಸಮಾರಂಭದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮನು ಅಸಂಖ್ಯಾತ ಕರಕುಶಲ ವಸ್ತುಗಳ ಆವಿಷ್ಕಾರಕ, ದೇವತೆಗಳ ವಾಸ್ತುಶಿಲ್ಪಿ, ಎಲ್ಲ ರೀತಿಯ ಆಭರಣಗಳ ತಯಾರಕ ಮತ್ತು ಅತ್ಯಂತ ಪ್ರಸಿದ್ಧ ಶಿಲ್ಪಿಯಾಗಿದ್ದರು. ದೇವತೆಗಳ ಎಲ್ಲ ವೈಮಾನಿಕ ರಥಗಳ ತಯಾರಕನಾಗಿದ್ದರು ಎಂದು ತಿಳಿಸಿದರು.

ಪ್ರಮುಖ ಬೀದಿಗಳಲ್ಲಿ ಕಲಶ ಹಾಗೂ ರಥೋತ್ಸವ ಮೆರವಣಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ನಡೆಯಿತು. ನಂತರ ಲಕ್ಷ್ಮೀ ನಗರದಲ್ಲಿರುವ ವಿಶ್ವಕರ್ಮ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಸಂಪನ್ನಗೊಂಡ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಮಾಜದ ಹಿರಿಯರಾದ ಮಲ್ಲಿಕಾರ್ಜುನ ಪತ್ತಾರ, ನಾಗಲಿಂಗ ಪತ್ತಾರ, ಸದಾಶಿವ ಬಡಿಗೇರ, ರಾಜು ಬಡಿಗೇರ, ಮಂಜುನಾಥ ಪತ್ತಾರ, ಚಂದ್ರಶೇಖರ ಬಡಿಗೇರ, ಕುಮಾರ ಪತ್ತಾರ, ಅಚ್ಛುತ ಪತ್ತಾರ, ಅಶೋಕ ಪತ್ತಾರ, ಅರವಿಂದ ಪತ್ತಾರ, ಮೋಹನ ಪತ್ತಾರ, ರಮೇಶ ಬಡಿಗೇರ, ಚಿದಾನಂದ ಪತ್ತಾರ, ಬಸವರಾಜ ಬಡಿಗೇರ, ಹಲವಾರು ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು.

ಡಿ.12 ರಂದು ಬೆಳಗ್ಗೆ ಕಲಶಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಚೇರ್ಮನ್ ಮೌನೇಶ ಬಡಿಗೇರ ತಿಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net