

ಐಗಳಿ: ಭಾರತೀಯ ಅಂಚೆ ಇಲಾಖೆ ಹೊಸ ಯೋಜನೆಗಳಿಂದ ಜನಪರ ಸೇವೆ ನೀಡುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ ಎಂದು ಅಂಚೆ ಅಧೀಕ್ಷಕ ವೆಂಕಟೇಶ ಬಾದಾಮಿ ಹೇಳಿದರು.
ಗ್ರಾಮದ ಅಂಚೆ ಕಚೇರಿಯಲ್ಲಿ ಗುರುವಾರ ಇಲಾಖೆಯ ನೂತನ ಐಟಿ 2.0 ಹೊಸ ತಂತ್ರಜ್ಞಾನ ಸೇವೆ ಉದ್ಘಾಟಿಸಿ ಮಾತನಾಡಿದರು.
ಚಿಕ್ಕೋಡಿ ಉಪ ವಿಭಾಗದ ಉಪ ಅಧೀಕ್ಷಕ ಐ.ಆರ್.ಮುತನಾಳೆ, ಎಸ್.ಬಿ.ಶಿರಹಟ್ಟಿ, ಬಿ.ಬಿ.ಮಾಳಿ, ಎಸ್.ಬಿ.ಕಮಲಾಕರ, ವಿ.ಯು.ನದ್ಾ, ಬಿ.ಎಂ.ಮುಗಳಿ, ರೇವತಿ ಹಿರೇಮಠ, ಪ್ರಜ್ಞಾ ಪತ್ತಾರ, ಶ್ರೀನಿಧಿ ಶಿರೋಶಿ, ಎಸ್.ಎಂ.ಬಡಿಗವಾಡ, ಜೆ.ಎಂ.ವನಾರಸೆ, ಎ.ಜಿ.ಗುಡಸಿ, ಆರ್.ಎನ್.ಮಶಾಳೆ ಇತರರಿದ್ದರು. ಗಿರೀಶ ಕುಲಕರ್ಣಿ ನಿರೂಪಿಸಿದರು. ಎಸ್.ಎಂ.ಮಂಟೂರ ವಂದಿಸಿದರು.