

ಧಾರವಾಡ: ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಎಲ್‌ಓಟಿ (ಲೆಫ್ಟ್ ಬಂಡಲ್ ಬ್ರಾಂಚ್ ಆಪ್ಟಿಮೈಸ್ಡ್ ಥೆರಪಿ) ಸಿಆರ್‌ಟಿಡಿ ಜತೆಗೆ ಕಂಡಕ್ಷನ್ ಸಿಸ್ಟಮï ಪೇಸಿಂಗ್ (ಸಿಎಸ್‌ಪಿ) ಅನ್ನು ಯಶಸ್ವಿಯಾಗಿ ನಿರ್ವಹಿಸಿ ಹೃದಯ ಚಿಕಿತ್ಸೆಯಲ್ಲಿ ಮಹತ್ತರ ಸಾಧನೆ ಮಾಡಿದೆ.
ಇತ್ತೀಚೆಗೆ 50 ವರ್ಷದ ಪುರುಷ ರೋಗಿಯೊಬ್ಬರು ತೀವ್ರ ಹೃದಯ ವೈಕಲ್ಯದಿಂದ ಬಳಲುತ್ತಿದ್ದರು. ಅವರಿಗೆ ಯಶಸ್ವಿಯಾಗಿ ಈ ಚಿಕಿತ್ಸೆ ಒದಗಿಸಲಾಗಿದ್ದು, ಅವರು ಉತ್ತಮ ಆರೋಗ್ಯ ಹೊಂದಿ ಆಸ್ಪತ್ರೆಯಿಂದ ತೆರಳಿದ್ದಾರೆ. ರೋಗಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಿದ್ದರೂ ಹೃದಯ ವೈಕಲ್ಯ ನಿರಂತರವಾಗಿ ಕಾಡುತ್ತಿತ್ತು. ಅವರಿಗೆ ಡೈಲೇಟೆಡ್ ಕಾರ್ಡಿಯೋಮಯೋಪತಿ, ತೀವ್ರವಾದ ಲೆಫ್ಟ್ ವೆಂಟ್ರಿಕಲ್ ಸಿಸ್ಟಾಲಿಕ್ ಡಿಸ್ಂಕ್ಷನ್ ಮತ್ತು ಸಂಪೂರ್ಣ ಲೆಫ್ಟ್ ಬಂಡಲ್ ಬ್ರಾಂಚ್ ಬ್ಲಾಕ್ ಎಂಬ ಸಂಕೀರ್ಣ ಸಮಸ್ಯೆಗಳಿರುವುದನ್ನು ಪತ್ತೆ ಹಚ್ಚಲಾಯಿತು. ವಿವರವಾಗಿ ತಪಾಸಣೆ ಮಾಡಿದ ಬಳಿಕ ಹಿರಿಯ ಹೃದಯರೋಗ ತಜ್ಞ ಡಾ.ರಘುಪ್ರಸಾದ್ ಎಸ್. ನೇತೃತ್ವದ ವೈದ್ಯರ ತಂಡವು ಎಲ್‌ಓಟಿ ಸಿಆರ್‌ಟಿಡಿ ಜತೆಗೆ ಸಿಎಸ್‌ಪಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಚಿಕಿತ್ಸೆ ನೀಡಿದ ಕೆಲವೇ ದಿನಗಳ ಒಳಗೆ ರೋಗಿಯನ್ನು ಮನೆಗೆ ಕಳುಹಿಸಲಾಯಿತು.
ಎಲ್‌ಓಟಿ ಎಂದರೇನು?
ಎಲ್‌ಓಟಿ ಎಂದರೆ ಲೆಫ್ಟ್ ಬಂಡಲ್ ಬ್ರಾಂಚ್ ಆಪ್ಟಿಮೈಸ್ಡ್ ಥೆರಪಿ ಎಂದರ್ಥ. ಈ ಚಿಕಿತ್ಸೆಯನ್ನು ಹೃದಯದ ಕಂಡಕ್ಷನ್ ಸಿಸ್ಟಮ್‌ನ ಎಡಗಡೆ ಬಂಡಲ್ ಬ್ರಾಂಚ್‌ಗೆ ಗುರಿಯಿಟ್ಟು ನಡೆಸಲಾಗುತ್ತದೆ. ಇದು ಪೇಸ್ ಮೇಕರ್ ಚಿಕಿತ್ಸೆಯ ಆಗಿರುವ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್‌ನ ವಿಶೇಷ ರೂಪವಾಗಿದ್ದು, ಹೃದಯದ ಲಯವನ್ನು ನಿಯಂತ್ರಿಸಲು ಮತ್ತು ಅದರ ನೈಸರ್ಗಿಕ ಕಂಡಕ್ಷನ್ ಮಾರ್ಗಗಳ ಮೂಲಕ ಪಂಪಿಂಗ್ ಸಾಮರ್ಥ್ಯ ಉತ್ತಮಗೊಳಿಸಲು ಈ ಚಿಕಿತ್ಸೆ ಮಾಡಲಾಗುತ್ತದೆ.
ಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ ಸೀನಿಯರ್ ಕನ್ಸಲ್ಟೆಂಟ್ ಹೃದ್ರೋಗ ತಜ್ಞ ಡಾ.ರಘುಪ್ರಸಾದ್ ಎಸ್. ಅವರು, ಈ ಸುಧಾರಿತ ಎಲ್‌ಓಟಿ ಸಿಆರ್‌ಟಿಡಿ ಜತೆಗೆ ಸಿಎಸ್‌ಪಿ ಚಿಕಿತ್ಸೆಯು ರೋಗಿಯ ಆರೋಗ್ಯ ಸ್ಥಿತಿ ಸ್ಥಿರಗೊಳಿಸಿರುವುದಲ್ಲದೆ ಅದರ ನೈಸರ್ಗಿಕ ಕಂಡಕ್ಷನ್ ಮಾರ್ಗದ ಮೂಲಕ ಹೃದಯದ ಲಯವನ್ನು ಪುನಃಸ್ಥಾಪಿಸಿದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಮ್ಮೆಗೆ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಪಾತ್ರವಾಗಿದೆ. ಈ ಮೂಲಕ ಹೃದಯ ಚಿಕಿತ್ಸೆಯ ವಿಚಾರದಲ್ಲಿ ಆಸ್ಪತ್ರೆಯು ರಾಷ್ಟç ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದರು.