ಮೈಸೂರಿನಲ್ಲಿ ಡಿ.3 ರಂದು ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್

Gravel racing
Published on

ಮೈಸೂರು: ಆಟೋಮೋಟಿವ್ ಸ್ಪೋಟ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಡಿ.3 ರಂದು ನಗರದ ಲಲಿತ ಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಫಾಲ್ಗುಣ ವಿ. ಅರಸ್ ಹೇಳಿದರು.

ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 100 ಚಾಲಕರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ನವದೆಹಲಿ, ಮಹಾರಾಷ್ಟ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳದ ಅಗ್ರಮಾನ್ಯ ಚಾಲಕರು ನಮ್ಮ ರಾಜ್ಯದ ನುರಿತ ಚಾಲಕರೊಂದಿಗೆ ಪೈಪೋಟಿ ಮಾಡಲಿದ್ದಾರೆ. ಡೆನ್ ತಿಮ್ಮಯ್ಯ, ಚೇತನ್ ಶಿವರಾಮ್, ಜಾಹನ್ ಗಿಲ್, ಎಂ.ಡೀನ್, ಪ್ರಗತಿ ಗೌಡ, ನಿಕಿತಾ ತಕಲೆ ಮುಂತಾದ ದೇಶದ ಅಗ್ರಮಾನ್ಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆ ಬೆ.8.30ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 5ಕ್ಕೆ ಮುಕ್ತಾಯವಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅತ್ಯಂತ ವೇಗದ ಚಾಲಕನಿಗೆ ಮೈಸೂರು ಗ್ರಾವೆಲ್ ಕಿಂಗ್-2023 ಬಿರುದಿನೊಂದಿಗೆ 2 ಲಕ್ಷ ನಗದು ಬಹುಮಾನ ಹಾಗೂ ಎಲ್ಲ ವಿಜೇತರಿಗೆ ಬೆಳ್ಳಿಯ ಟ್ರೋಫಿ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಅರುಣ್ ಅರಸ್, ಚರಣ್‌ರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net