ನೆಲಕಚ್ಚಿದ ಬಾಳೆ

ನೆಲಕಚ್ಚಿದ ಬಾಳೆ
Published on

ಮದ್ದೂರು: ತಾಲೂಕಿನ ಘಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಲಿಂಗರಾಜು ಅವರು ಜಮೀನಿನಲ್ಲಿ ಬೆಳೆದಿದ್ದ ಫಸಲಿಗೆ ಬಂದಿದ್ದ ಬಾಳೆ ಫಸಲು ಧರೆಗೆ ಉರುಳಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಗ್ರಾಮದ ತಿಬ್ಬಯ್ಯ ಅವರ ಪುತ್ರ ಲಿಂಗರಾಜು 2.5 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 2600 ಬಾಳೆ ಗಿಡಗಳ ಪೈಕಿ 2 ಸಾವಿರ ಬಾಳೆ ಫಸಲು ನೆಲ ಕಚ್ಚಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಲಿಂಗರಾಜು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net