ಸುಗಮ ಆಡಳಿತಕ್ಕೆ ಗ್ರಾಪಂ ಪೂರಕ, ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಅಭಿಮತ ಕಣೇಗೌಡನಹಳ್ಳಿಯಲ್ಲಿ ಗ್ರಾಪಂ ಕಚೇರಿ ಉದ್ಘಾಟನೆ

28 Nela ph 01 Grama pachayath Office Inguration
Published on

ನೆಲಮಂಗಲ: ಸುಗಮ ಆಡಳಿತ ವ್ಯವಸ್ಥೆ ಜತೆಗೆ ಅಭಿವೃದ್ಧಿ ಸಾಧಿಸುವಲ್ಲಿ ಗ್ರಾಮ ಪಂಚಾಯಿತಿ ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ತಿಳಿಸಿದರು.

ತಾಲೂಕಿನ ಕಣೇಗೌಡನಹಳ್ಳಿಯಲ್ಲಿ ಗುರುವಾರ ನೂತನ ಗ್ರಾಪಂ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಮೈತ್ರಿ ಸರ್ಕಾರ ಅವಧಿಯಲ್ಲಿ ಪಟ್ಟಣಕ್ಕೆ ಸಮೀಪವಿದ್ದ ವಾಜರಹಳ್ಳಿ, ಅರಿಶಿನಕುಂಟೆ, ವಿಶ್ವೇಶ್ವಪುರ ಹಾಗೂ ಬಸವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆ ಮಾಡಿ ನೆಲಮಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆರಿಸಿದ್ದು, ವಿಶ್ವೇಶ್ವರಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಉಳಿದುಕೊಂಡಿದ್ದ ಗ್ರಾಮಗಳನ್ನು ಒಗ್ಗೂಡಿಸಿ ಕಣೇಗೌಡನಹಳ್ಳಿ ಗ್ರಾಮವನ್ನು ಗ್ರಾಮಪಂಚಾಯಿತಿ ಕೇಂದ್ರವಾಗಿ ಮಾಡಲಾಗಿದೆ ಎಂದರು.

ಈ ಹಿಂದಿನ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ 155 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈಗ ನಗರಸಭೆ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಒಳಚರಂಡಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅನುದಾನವನ್ನು ತಾತ್ಕಲಿಕವಾಗಿ ತಡೆ ಹಿಡಿದಿದ್ದು, ಅಗತ್ಯವಿರುವ ಹೆಚ್ಚಿನ ಅನುದಾನ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದರು.

ಮಾಜಿ ವಸತಿ ಸಚಿವ ಅಂಜನಾಮೂರ್ತಿ ಮಾತನಾಡಿ, ಕರೊನಾ ಸೋಂಕಿನಿಂದಾಗಿ ದೇಶದ ಲಕ್ಷಾಂತರ ಜನ ಸಂಕಷ್ಟಕ್ಕೀಡಾಗಿದ್ದಾರೆ. ಸೋಂಕು ದೇಶದಿಂದ ದೂರವಾಗಲು ಪ್ರತಿಯೊಬ್ಬರೂ ಜಾಗೃತರಾಗಬೇಕು. ಸಮರ್ಪಕ ಮೂಲಸೌಕರ್ಯಗಳ ಜತೆಗೆ ಸಮಗ್ರ ಅಭಿವೃದ್ಧಿ ನೂತನ ಗ್ರಾಮಪಂಚಾಯಿತಿಯ ಗುರಿಯಾಗಬೇಕು ಎಂದರು.

ಕಣೇಗೌಡನಹಳ್ಳಿ, ಇಸ್ಮಾಂಪುರ, ಕೆ.ಜಿ.ಶ್ರೀನಿವಾಸ್‌ಪುರ, ನರಸೀಪಾಳ್ಯ, ಗಂಗಾಧರನಪಾಳ್ಯ, ವೀರನಂಜೀಪುರ, ಹುರುಳಿಹಳ್ಳಿ , ಗಂಡರಗೋಳಿಪುರ, ವೀರರಾಘವನಪಾಳ್ಯ, ಓಬನಾಯಕನಹಳ್ಳಿ ಗ್ರಾಮಗಳನ್ನು ನೂತನ ಕಣೇಗೌಡನಹಳ್ಳಿ ಗ್ರಾಪಂಗೆ ಸೇರಲಿವೆ ಎಂದು ಪಿಡಿಒ ನರಸಿಂಹಮೂರ್ತಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ತಿಮ್ಮರಾಯಪ್ಪ, ಪುಷ್ಪಾಸಂಪತ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್, ಸದಸ್ಯರಾ ಬೆಟ್ಟೇಗೌಡ, ಸಲೀಂಪಾಷ, ಗ್ರಾಪಂ ಅಧ್ಯಕ್ಷೆ ಟಿ.ಲೀಲಾವತಿ ಮಂಜುನಾಥ್, ಉಪಾಧ್ಯಕ್ಷೆ ಮುನಿಕ್ಷ್ಮಮ್ಮಗಂಗಾಧರಪ್ಪ, ಸದಸ್ಯ ಕೆ.ಎಸ್.ಗೋವಿಂದರಾಜು, ಸಿ.ಅಶ್ವತ್ಥ್, ಕೆ.ಕೆಂಪೇಗೌಡ, ಚೌಡಮ್ಮ, ಇಕ್ಬಾಲ್, ಎಚ್.ಯಲ್ಲಪ್ಪ, ಬೈಲ್‌ಮೂರ್ತಿ, ಚಾಂದ್‌ಪಾಷ, ನಗೀನಾ, ಕೆಂಪರಾಜು, ಲಕ್ಷ್ಮೀದೇವಮ್ಮ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ಕಾರ್ಯದರ್ಶಿ ಹನುಮಂತರಾಜು, ಮುಖಂಡ ವಿ.ಹನುಮಂತರಾಜು, ಗೋವಿಂದರಾಜು ಎ.ಆರ್.ಹನುಮಂತರಾಜು ಮತ್ತಿತರರು ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net