

ಬೆಳಗಾವಿ:ಮಹಾತ್ಮಾ ಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯಡಿ 2023-24ನೇ ಸಾಲಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಗ್ರಿ ವೆಚ್ಚವನ್ನು ನೀಡಲಾಗುವುದು.
ಈಯೋಜನೆಯಡಿ ದ್ರಾಕ್ಷಿ, ಬಾಳೆ, ದಾಳಿಂಬೆ, ಮಾವು, ಸೀಬೆ, ಚಿಕ್ಕು, ನಿಂಬೆ, ಡ್ರಾೃಗನ್, ಕರಿಬೇವು, ಗುಲಾಬಿ, ನುಗ್ಗೆ, ಜಾಮೂನು, ಹುಣಸೆ, ಸೀತಾಲ, ಗೇರು, ತೆಂಗು, ಅಡಿಕೆ, ತಾಳೆ, ಪಪ್ಪಾಯಿ, ಕೋಕೊ, ಹಲಸು, ಕಾಫಿ ಹಾಗೂ ಅಪ್ರಧಾನ ಹಣ್ಣಿನ ಬೆಳೆಗಳಾದ ನೇರಳೆ, ನೆಲ್ಲಿ, ಬೆಣ್ಣೆ ಹಣ್ಣು, ರಾಮಬುತಾನ, ಅಪ್ಪೆಮಿಡಿ ಬೆಳೆಗಳು, ದಾಲಚಿನ್ನಿ, ಲವಂಗ, ಕಾಳುಮೆಣಸು, ಜಾಯಿಕಾಯಿ, ಸರ್ವಸಾಂಬಾರ ಬೆಳೆಗಳ ಹೊಸ ತೋಟಗಳನ್ನು ಅಭಿವದ್ಧಿಪಡಿಸಲು ಹಾಗೂ ಮಾವು, ಚಿಕ್ಕು, ತೆಂಗು, ನಿಂಬೆ, ಅಡಿಕೆ, ತಾಳೆ ಮತ್ತು ಗೋಡಂಬಿ ಬೆಳೆಗಳ ಪುನಃಶ್ಚೇತನ ಕಾಮಗಾರಿಗಳನ್ನು ನರೇಗಾದಲ್ಲಿ ತೆಗೆದುಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.