ಅನುದಾನ ಹಂಚಿಕೆಯಲ್ಲಿ ಸರ್ಕಾರ ನಿರ್ಲಕ್ಷಿಸಿಲ್ಲ

6 SND 05
ತುರ್ವಿಹಾಳ ಎಪಿಎಂಸಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಮಾಜಿ ಅಧ್ಯಕ್ಷ ಶಾಮೀದ್‌ಸಾಬ್ ಚೌದ್ರಿ, ಅಲ್ಪಸಂಖ್ಯಾತರ ಘಟಕ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಎಂ.ಡಿ.ಫಾರೂಕ್‌ಸಾಬ್, ಮಲ್ಲನಗೌಡ ದೇವರಮನಿ ಇತರರಿದ್ದರು.
Published on

ಸಿಂಧನೂರು: ತಾಲೂಕಿನ ತುರ್ವಿಹಾಳ ಎಪಿಎಂಸಿಯಲ್ಲಿ 1.85 ಕೋಟಿ ರೂ.ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಕಳೆದ ವರ್ಷ ಎರಡು ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈಗ 1.85 ಕೋಟಿ ರೂ.ಗಳಲ್ಲಿ ಇನ್ನುಳಿದ ರಸ್ತೆ ಜತೆಗೆ ಚರಂಡಿ ನಿರ್ಮಾಣ ಮಾಡಲಾಗುವುದು. ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನೀರಾವರಿ ಅಭಿವೃದ್ಧಿಗೆ ಅನುದಾನ ಸರ್ಕಾರ ನೀಡಿದೆ. ಪ್ರತಿಪಕ್ಷದವರು ಆರೋಪಿಸುವಂತೆ ಶಾಸಕರನ್ನು ಸರ್ಕಾರ ನಿರ್ಲಕ್ಷಿಸಿಲ್ಲ ಎಂದರು.

ಪ್ರಮುಖರಾದ ಪಂಪನಗೌಡ ಜಾಲಿಹಾಳ, ಉಮರ್‌ಸಾಬ್, ಮಂಟೆಪ್ಪ ಎಲೆಕೂಡ್ಲಿಗಿ, ಕರಿಲಿಂಗಪ್ಪ ಹಳ್ಳಿ, ಗುತ್ತಿಗೆದಾರ ಶರಣೇಗೌಡ ಮಾನ್ವಿ, ಆರ್.ಶಿವನಗೌಡ, ಬಸವರಾಜ ಡಣಾಪುರ, ಶಾಮೀದ್‌ಅಲಿ ಅರಬ್, ಭೀಮದಾಸ, ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net