ಗ್ರಾಮೀಣ ರಸ್ತೆಗಳಿಗೆ ಅನುದಾನ

KDR bagina
ಯಳ್ಳಂಬಳಸೆ ಗ್ರಾಮದ ಕೆರೆಗೆ ಶಾಸಕ ಕೆ.ಎಸ್.ಆನಂದ್ ಬಾಗಿನ ಅರ್ಪಿಸಿದರು. ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಸಲೀಂ, ಚೈತ್ರಾ, ಪ್ರೇಮಾವತಿ, ಈಶ್ವರಪ್ಪ, ಸೋಮೇಶ್, ಎಂ.ಆರ್.ಟಿ. ಸುರೇಶ್, ಮುದಿಯಪ್ಪ ಇತರರಿದ್ದರು.
Published on

ಕಡೂರು: ಯಳ್ಳಂಬಳಸೆಯಲ್ಲಿ ಕಸ್ತೂರ್ಬಾ ವಸತಿ ಶಾಲೆ ಕಟ್ಟಡ ನಿರ್ಮಿಸಬೇಕು ಎಂಬ ಬೇಡಿಕೆ ಇದೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಅನುದಾನ ಲಭ್ಯವಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಪ್ರಯತ್ನ ನಡೆದಿದೆ. ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸಬೇಕು. ಕೆಲ ರಸ್ತೆಗಳಿಗೆ ಅನುದಾನ ಒದಗಿಸಿಕೊಡಲಾಗಿದೆ. ಉಳಿದ ಕಡೆ ಅನುದಾನ ಒದಗಿಸಿ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಲಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಯಳ್ಳಂಬಳಸೆ ಗ್ರಾಮದ ಕೆರೆಗೆ ಭಾನುವಾರ ಗ್ರಾಪಂ ಹಾಗೂ ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿ, ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಿರುವ ಯಳ್ಳಂಬಳಸೆ ಕೆರೆ ಅಭಿವೃದ್ಧಿ ಕಾಮಗಾರಿಗೆ 4 ಕೋಟಿ ರೂ. ವೆಚ್ಚದಲ್ಲಿ ಚಾಲನೆ ದೊರೆತಿದೆ ಎಂದರು.
ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಬರಗಾಲದಿಂದ ಪರಿತಪಿಸುತ್ತಿದ್ದ ತಾಲೂಕಿಗೆ ವರುಣನ ಕೃಪೆಯಿಂದ ಕೆರೆಕಟ್ಟೆಗಳು ಭರ್ತಿಗೊಂಡಿವೆ. ಗ್ರಾಮಗಳನ್ನು ಅಭಿವೃದ್ಧಿಗೊಳಿಸಲು ಶಾಸಕರು ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯರಾದ ಸೈಯಾದ್ ಸಲೀಂ, ಚೈತ್ರಾ ರವಿಕುಮಾರ್, ಪ್ರೇಮಾವತಿ ಕೇಶವಪ್ಪ, ಈಶ್ವರಪ್ಪ, ಸೋಮೇಶ್, ಮುಖಂಡರಾದ ಎಂ.ಆರ್.ಟಿ.ಸುರೇಶ್, ಮುದಿಯಪ್ಪ, ತಿಮ್ಮಯ್ಯ, ಅಹ್ಮದ್‌ಜಾನ್, ವೈ.ಇ.ನಾಗರಾಜ್, ಮಂಜುನಾಥ್, ಜಗದೀಶ್, ಸಣ್ಣ ನೀರಾವರಿ ಇಲಾಖೆ ಅಭಿಯಂತರ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net