ಅಭಿವೃದ್ಧಿಗೆ ಅನುದಾನ ಭರಪೂರ

KDR road
ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಗುದ್ದಲಿಪೂಜೆ ನೆರವೇರಿಸಿದರು. ಪ್ರಸನ್ನ, ಮುರಳಿ, ಕಾಂತರಾಜು, ತಿಮ್ಲಾಪುರ ದಿನೇಶ್ ಇತರರಿದ್ದರು.
Published on

ಕಡೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಂಚನಹಳ್ಳಿಯಲ್ಲಿ ಬುಧವಾರ 20 ಕೋಟಿ ರೂ. ವೆಚ್ಚದ ಎಸ್‌ಎಚ್‌ಡಿಪಿ 5ನೇ ಹಂತದ ಸಿಂಗಟಗೆರೆ-ಪಂಚನಹಳ್ಳಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಪಂಚನಹಳ್ಳಿ ಜನರು ಕಡೂರಿಗೆ ಬರಲು ಒಂದು ಗಂಟೆಗೂ ಹೆಚ್ಚು ಕಾಲ ಬೇಕಾಗುತ್ತದೆ. ಸುಸಜ್ಜಿತ ರಸ್ತೆ ಇಲ್ಲದಿದ್ದರೆ ಕಡೂರು ತಲುಪಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ. ಇದನ್ನು ಮನಗಂಡು ಪಂಚನಹಳ್ಳಿ ಮತ್ತು ಸಿಂಗಟಗೆರೆ ಹೋಬಳಿಗಳ ನಡುವಿನ 19.20 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಒಂದು ರಸ್ತೆ ಅಭಿವೃದ್ಧಿಗೆ ಒಂದೇ ಹಂತದಲ್ಲಿ 20 ಕೋಟಿ ಮಂಜೂರಾಗಿರುವುದು ತಾಲೂಕಿನಲ್ಲಿ ಇದೇ ಮೊದಲು. ಗ್ಯಾರಂಟಿ ಯೋಜನೆಗಳಿಂದ ಇತರ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂದು ದೂರುವವರು ಇದನ್ನು ಗಮನಿಸಬೇಕು. ಶಾಸಕನಾದ ನಂತರ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ಪಂಚನಹಳ್ಳಿ ಹೋಬಳಿ ವ್ಯಾಪ್ತಿಯ ಬಹಳಷ್ಟು ದೇವಸ್ಥಾನಗಳು ಮತ್ತು ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಪಕ್ಷದ ಕಾರ್ಯಕರ್ತರು ಸರ್ಕಾರದಿಂದ ಬಂದಿರುವ ಅನುದಾನಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಪಿಡಬ್ಲುೃಡಿ ಎಇಇ ವೈ.ಆರ್.ಬಸವರಾಜನಾಯ್ಕ, ಸಹಾಯಕ ಇಂಜಿನಿಯರ್‌ಗಳಾದ ಗಿರೀಶ್, ರಾಕೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಪಿ.ಸಿ.ಪ್ರಸನ್ನ, ಎಂ.ಮುರಳಿ, ಎನ್.ಸಿ.ಕಾಂತರಾಜು, ತಿಮ್ಮಲಾಪುರ ದಿನೇಶ್, ಶೀಲಾ, ಪಿ.ಎಂ.ಪಾಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net