

ಸವಣೂರ: ಯಾದವ ಸಮಾಜಕ್ಕೆ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕೆರಿಮತ್ತಿಹಳ್ಳಿಯಲ್ಲಿ 2 ಎಕರೆ ಜಮೀನು ನೀಡಲಾಗಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕೃಷ್ಣ ಜನ್ಮಾಷ್ಟಮಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಅದಕ್ಕೆ ಬೇಕಾದ ದಾಖಲೆ ಸರಿಪಡಿಸಿಕೊಂಡು ಅನುದಾನ ಪಡೆದು ಸಭಾಭವನ ನಿರ್ಮಿಸಬೇಕು. ಸಮಾಜದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು.
ಯಾದವ ಸಮಾಜದ ತಾಲೂಕು ಉಪಾಧ್ಯಕ್ಷ ಪಂಚಪ್ಪ ತೋಲಕೊಪ್ಪದ ಮಾತನಾಡಿ, ಯಾದವ ಸಮಾಜ ಅಭಿವೃದ್ಧಿ ನಿಗಮ-ಮಂಡಳಿ ರಚಿಸಬೇಕು ಎಂದರು.
ಎಚ್.ಕೆ. ಕೊರಡೂರ ಉಪನ್ಯಾಸ ನೀಡಿದರು. ಯಾದವ ಸಮಾಜದ ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ, ತಹಸೀಲ್ದಾರ್ ಗಣೇಶ ಸವಣೂರ, ಯಾದವ ಸಮಾಜದ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಹಾಲಗಿ, ಪದಾಧಿಕಾರಿಗಳಾದ ಯಲ್ಲಪ್ಪ ಬೆನಕನಹಳ್ಳಿ, ರಮೇಶ ಕುಣಿಮೆಳ್ಳಿಹಳ್ಳಿ, ಮಾರುತಿ ಹಾಲಗಿ, ರಾಮಣ್ಣ ಗೊಲ್ಲರ, ಯಲ್ಲಪ್ಪ ತೊಲಕೊಪ್ಪದ, ನಿಂಗಪ್ಪ ದಾಸರ, ಮಲ್ಲನಗೌಡ ಗೌಡ್ರ, ಮಾಲತೇಶ ಕಟ್ಟಿ, ಉಮೇಶ ದಾಸರ, ಬಸವರಾಜ ಕೃಷ್ಣಾಪುರ, ಗುಡ್ಡಪ್ಪ ನಾಗನೂರ ಹಾಗೂ ಇತರರು ಪಾಲ್ಗೊಂಡಿದ್ದರು.