ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ

13 KURGODU 01
ಕುಡತಿನಿಯಲ್ಲಿ ಅಂಗನವಾಡಿ ಕೇಂದ್ರ ಕಟ್ಟಡವನ್ನು ಸಂಸದ ಈ.ತುಕಾರಾಮ್, ಶಾಸಕಿ ಈ.ಅನ್ನಪೂರ್ಣ ಉದ್ಘಾಟನೆ ಮಾಡಿದರು. ಪಪಂ ಅಧ್ಯಕ್ಷೆ ಆರ್.ಸುಜಾತಾ, ಉಪಾಧ್ಯಕ್ಷ ಕನಿಕೇರಿ ಪಂಪಾಪತಿ, ಸತ್ಯಪ್ಪ, ದೊಡ್ಡಬಸಪ್ಪ, ವಿ.ರಾಜಶೇಖರ, ವೆಂಕಟರಮಣಬಾಬು, ಇಸಿಕೆ ಚಂದ್ರಪ್ಪ, ಲೆನಿನ್, ಛಲವಾದಿ ಶ್ರೀನಿವಾಸ ಇತರರಿದ್ದರು.
Published on

ಕುರುಗೋಡು: ಸಂಸದನಾಗಿ ನಾನು ಸಂಡೂರು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಲೋಕಸಭೆಯಲ್ಲಿ ಈಗಾಗಲೇ ಜಿಲ್ಲೆಯ ಅಗತ್ಯ ವಿಷಯಗಳ ಬಗ್ಗೆ ಪ್ರಾಸ್ತಾಪಿ ಸರ್ಕಾರಕ್ಕೆ ಅನುದಾನ ಒದಗಿಸಲು ಮನವಿ ಮಾಡಲಾಗಿದೆ ಎಂದು ಸಂಸದ ಈ ತುಕಾರಾಮ್ ಹೇಳಿದರು.

ಕುಡತಿನಿಯಲ್ಲಿ ಶಾಸಕ ಹಾಗೂ ಸಂಸದರ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಪಟ್ಟಣದಲ್ಲಿ 4.70 ಕೋಟಿ ರೂ. ವೆಚ್ಚದ ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, 2.45 ಕೋಟಿ ರೂ. ವೆಚ್ಚದ ಕುಡತಿನಿ-ಹೊಸಪೇಟೆ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ, 20 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ, ಇಂದಿರಾ ಕ್ಯಾಂಟೀನ್, ಹಾಗೂ ರೂ.1.50 ಕೋಟಿ ರೂ ವೆಚ್ಚದ ನೀರಿನ ಟ್ಯಾಂಕ್ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ಜನರು ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಏಳಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ ಸಕಾಲಕ್ಕೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net