ಎನ್.ಆರ್.ಪುರ ವರ್ತಕರ ಸಂಘಕ್ಕೆ ನಿವೇಶನ ನೀಡಿ

nrp 1 (11)
Published on

ಎನ್.ಆರ್.ಪುರ: ವರ್ತಕರ ಸಂಘದಿಂದ ಕಾಯಂ ನಿವೇಶ ನೀಡುವಂತೆ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದ್ದು, ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್ ಹೇಳಿದರು.

ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ನಡೆದ ವರ್ತಕರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾ ಸಭೆಯಲ್ಲಿ ಮಾತನಾಡಿ, ಸಂಘಕ್ಕೆ ಕಾಯಂ ನಿವೇಶನ ನೀಡುವವರೆಗೆ ತಾತ್ಕಾಲಿಕವಾಗಿ ಖಾಲಿ ಇರುವ ಸರ್ಕಾರಿ ಕಟ್ಟಡ ಒಂದು ಕೊಠಡಿ ನೀಡುವುದಾಗಿ ಶಾಸಕ ರಾಜೇಗೌಡರು ಡುವ ಭರವಸೆ ನೀಡಿದ್ದಾರೆ. ಹಲವಾರು ವರ್ಷಗಳಿಂದ ವರ್ತಕರ ಸಂಘದವರು ರಸ್ತೆ ವಿಸ್ತರಣೆಗೆ ಶಾಸಕರು ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿ ಎಂ.ಶ್ರೀನಿವಾಸ್ ಅವರು 60 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಎಂದರು.

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಪಾವನಿ.ಸಿ.ಜೈನ್, ಸಂಘದ ಹಿರಿಯರಾದ ಟಿ.ಕೃಷ್ಣ, ಎಚ್.ಬಿ.ರಘುವೀರ್, ಮಹಮ್ಮದ್ ಗೌಸ್, ಜಿ.ಕೆ.ವೆಂಕಟೇಶ್ ಮೂರ್ತಿ, ಆನಂದ ಟೈಲರ್, ರವಿಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net