

ಬಂಟ್ವಾಳ: ವಗ್ಗ ವಲಯದ ಮಧ್ವ ಕಾರ್ಯ ಕ್ಷೇತ್ರದ ಮೂಡುಪಡುಕೋಡಿ ಗ್ರಾಮದ ಕೊಳಲ ಬಾಕಿಮಾರು ಎಂಬಲ್ಲಿ ನೂತನ ಅಂಚೆ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಅನುದಾನ 50 ಸಾವಿರ ರೂ. ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ಕಟ್ಟಡ ಸಮಿತಿ ಅಧ್ಯಕ್ಷ ಬೂಬ ಸಪಲ್ಯ ಮುಂಡಬೈಲು ಅವರಿಗೆ ಹಸ್ತಾಂತರಿಸಿದರು.
ಮೂಡುಪಡುಕೋಡಿ ಶಾಖಾ ಅಂಚೆಪಾಲಕ ಮಹಮ್ಮದ್ ಕಲಿಲ್, ಸಮಿತಿ ಸದಸ್ಯರಾದ ದಿನೇಶ್ ಮೂಲ್ಯ, ಹರೀಶ್ ಶೆಟ್ಟಿ, ಲೋಕಯ್ಯ ಗೌಡ, ಶೀನ ಬಂಗೇರ, ರಾಮಚಂದ್ರ ಭಟ್, ಸತೀಶ್ ಸಪಲ್ಯ, ಕೇಶವ, ವಗ್ಗ ವಲಯದ ಮೇಲ್ವಿಚಾರಕಿ ಸವಿತಾ, ವಲಯದ ಸೇವಾ ಪ್ರತಿನಿಧಿಗಳಾದ ಸುಮಿತ್ರಾ, ಭಾರತಿ, ಮಾಧವ ಹಾಗೂ ಮಧ್ವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮೋಹಾನಂದ ಕುಲಾಲ್, ಚೆನೈತ್ತೋಡಿ ಕಾರ್ಯಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಯಶೋಧರ ಸಪಲ್ಯ ಉಪಸ್ಥಿತರಿದ್ದರು.