ವಿವಿಧ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು

Grant sanctioned for construction of various buildings
ಬಸನಗೌಡ ಪಾಟೀಲ ಯತ್ನಾಳ
Published on

ವಿಜಯಪುರ: ಪ್ರಸಕ್ತ ಸಾಲಿನ ನಗರ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿಯಡಿ ಎಸ್​ಸಿಪಿ, ಟಿಎಸ್​ಪಿ ಯೋಜನೆಗೆ 48 ಲ ರೂ.ಅನುದಾನ ಮಂಜೂರಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ವಾರ್ಡ್​ ನಂ. 3 ರ ಗ್ಯಾಂಗ್​ ಬಾವಡಿ (ಜಯನಗರ) ವೀರಶೈವ ಕಕ್ಕಯ್ಯ ಕಲ್ಯಾಣ ಮಂಟಪ ಶಿವ ಮಂದಿರ ದೇವಸ್ಥಾನ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 10 ಲ ರೂ., ವಾರ್ಡ್​ ನಂ. 10 ರ ವ್ಯಾಪ್ತಿಯ ವಡ್ಡರ ಓಣಿಯ ಪಾಂಡುರಂಗ ವಿಠಲ ದೇವಸ್ಥಾನ ಬಳಿ ಒಳಾಂಗಣ ಸಾಂಸತಿಕ ಭವನಕ್ಕೆ 15 ಲ ರೂ., ವಾರ್ಡ್​ ನಂ. 14ರ ರಾಣಿ ಬಗೀಚ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಿಸಲು 10 ಲ ರೂ., ತೊರವಿ ತಾಂಡಾ ನಂ.1 ರಲ್ಲಿನ ಸೇವಾಲಾಲ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 8 ಲ ರೂ., ಮತ್ತು ವಾರ್ಡ್​ ನಂ. 18ರ ಹರಣಶಿಕಾರಿ ಓಣಿಯ ಲಕ್ಷಿ$್ಮ ದೇವಸ್ಥಾನ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 5 ಲ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net