ಬೆಂಗಳೂರು: ಶಕ್ತಿ ಯೋಜನೆಯ ಜುಲೈ ತಿಂಗಳ ಅನುದಾನವನ್ನು ರಾಜ್ಯ ಸರ್ಕಾರ ಸೋಮವಾರ ಬಿಡುಗಡೆಯಾಗಿದೆ.
ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಜುಲೈ ತಿಂಗಳಿನಲ್ಲಿ ಉಚಿತವಾಗಿ ಪ್ರಯಾಣಿಸಿದ್ದ ವೆಚ್ಚದ ಮರುಪಾವತಿಗಾಗಿ ನಾಲ್ಕು ನಿಗಮಕ್ಕೆ ೨೯೪.೭೪ ಕೋಟಿ ರೂ ಬಿಡುಗಡೆ ಮಾಡಿದೆ. ಮತ್ತೊಂದೆಡೆ ಜೂ.೧೧ ರಿಂದ ಆ.೨೦ ವರೆಗೆ ನಾಲ್ಕು ನಿಗಮಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿರುವ ಟಿಕೆಟ್ ವೆಚ್ಚ ೧೦೦೦ ಕೋಟಿ ದಾಟಿದೆ.