ಸಮಗ್ರ ಮಾಹಿತಿ ನೀಡದರೆ ಮಾತ್ರ ಅನುದಾನ

Mankal vaidya
Published on

ಭಟ್ಕಳ: ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಕೆಲಸಗಳ ಬಗ್ಗೆ ಸಮಗ್ರ ಮಾಹಿತಿ ನೀಡದರೆ ಮಾತ್ರ ಸರ್ಕಾರದಿಂದ ಅನುದಾನ ತರಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಿ ಬಡವರಿಗಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಮಾವಳ್ಳಿಯ ಹಿರೋದೋಮಿಯಲ್ಲಿ ಅಂಗನವಾಡಿ ಕಟ್ಟಡ ಪೂರ್ಣಗೊಂಡರೂ ಶೌಚಗೃಹ ನಿರ್ವಿುಸದೇ ಮೂರುವರ್ಷ ಕಳೆದ ಬಗ್ಗೆ ಜಿಲ್ಲಾ ಪಂಚಾಯಿತಿ ಇಂಜಿನಿಯರರನ್ನು ತರಾಟೆಗೆ ತೆಗೆದುಕೊಂಡರು. ಪುರಸಭೆಯ ವ್ಯಾಪ್ತಿಯ 5 ಅಂಗನವಾಡಿ ಕಟ್ಟಡ ನಿರ್ವಣಕ್ಕೆ ಪುರಸಭೆಯಿಂದ ಜಾಗ ನೀಡುವಂತೆ ತಿಳಿಸಿದರು.

ವಿದ್ಯಾರ್ಥಿಗಳಿಗೆ ಬಸ್​ಪಾಸ್ ವಿತರಿಸಿದ ಸಂಖ್ಯೆಗನುಗುಣವಾಗಿ ಬಸ್ ಬೀಡುವ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಬಸ್ ವಿಳಂಬದ ಬಗ್ಗೆ ದೂರಿದರೆ ಸಹಿಸುವುದಿಲ್ಲ ಎಂದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ 200 ಕಿರು ಸೇತುವೆ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದ್ದು, ಹಂತಹಂತವಾಗಿ ಅನುದಾನ ನೀಡಲಾಗುವುದು. ಪಟ್ಟಣದ ಸಾಗರ ರಸ್ತೆಯಿಂದ ತಲಗೋಡ ಕ್ರಾಸ್​ವರೆಗೆ ರಸ್ತೆ ಅಭಿವೃದ್ಧಿಗೊಳಿಸಿ ಫುಟ್​ಪಾತ್ ನಿರ್ವಣಕ್ಕೆ 28 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ತಾಪಂ ಆಡಳಿತಾಧಿಕಾರಿ ಸರೋಜಾ ವಿ,. ಇಒ ವೆಂಕಟೇಶ ನಾಯಕ, ಪುರಸಭೆ ಉಪಾಧ್ಯಕ್ಷ ಅಲ್ತಾಫ ಖರೂರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net