ಅನುದಾನ ದುರ್ಬಳಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

1
ಅನುದಾನ ದುರ್ಬಳಕೆ ಖಂಡಿಸಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದಿಂದ ಉಪವಿಭಾಗಾಧಿಕಾರಿ ಮೆಹಬೂಬಿಗೆ ಮನವಿ ಸಲ್ಲಿಸಲಾಯಿತು. ಸತೀಶ ಅಪ್ಪಾಜಿಗೋಳ, ಬಸವರಾಜ ಹುಂದ್ರಿ, ಶಾಂಭವಿ ಅಶ್ವತ್ಥಪುರ ಇತರರಿದ್ದರು.
Published on

ಚಿಕ್ಕೋಡಿ: ಹಿಂದುಳಿದ ಮತ್ತು ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿರುವ ಎಸ್‌ಸಿಪಿ-ಟಿಎಸ್‌ಪಿ 11 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟಿಸಿ, ಉಪವಿಭಾಗಾಧಿಕಾರಿ ಮೆಹಬೂಬಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಹುಂದ್ರಿ, ಸತ್ಯಪ್ಪ ನಾಯಿಕ, ಶಾಂಭವಿ ಅಶ್ವತ್ಥಪುರ, ಶಕುಂತಲಾ ಡೋಣವಾಡೆ, ರಾಜು ಹರಗನ್ನವರ, ಬಸವಣ್ಣಿ ಡೋಣವಾಡೆ, ಶಿವಾನಂದ ನವಿನಾಳೆ, ವಿಯಶ್ರೀ ಪಾಟೀಲ, ಸುನೀತಾ ಜಕ್ಕನ್ನವರ, ಸುವರ್ಣಾ ಹಂಪನ್ನವರ, ಪ್ರಸಾದ ಪಚ್ಚಂಡಿ, ಬಾಬಾಸಾಬ ಕೆಂಚನ್ನವರ, ಪ್ರಶಾಂತ ಕಾಳಿಂಗೆ, ಶ್ರೀನಾಥ ಘಟ್ಟಿ, ಕೈಲಾಸ ಮಾಳಗೆ, ಸಂಜೀವ ಅಪ್ಪಾಜಿಗೋಳ, ಸುಕುಮಾರ ಅಪ್ಪಾಜಿಗೋಳ, ಸೌರಭ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net