ಇಂಟರ್ ಸಿಟಿ ರೈಲು ಮಂಜೂರು ಮಾಡಿ

Petition submitted to Union Minister Shobha Karandlaje
ಚಿಕ್ಕಮಗಳೂರು-ಬೆಂಗಳೂರು ನಗರದ ನಡುವೆ ಪ್ರತಿನಿತ್ಯ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಮಂಜೂರಿಗೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಲಾಯಿತು. ಟಿ.ಎಸ್.ಚಂದ್ರಶೇಖರ್, ತನೋಜ್‌ಕುಮಾರ್, ಸಾಕೇತ್, ಕೌಶಿಕ್ ಇದ್ದರು.
Published on

ಚಿಕ್ಕಮಗಳೂರು: ಚಿಕ್ಕಮಗಳೂರು-ಬೆಂಗಳೂರು ನಗರದ ನಡುವೆ ಪ್ರತಿನಿತ್ಯ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲು ಮಂಜೂರು ಮಾಡುವಂತೆ ಒತ್ತಾಯಿಸಿ ವರ್ತಕರ ಸಂಘ ಮತ್ತು ವಾಸವಿ ಯುವ ಫೆಡರೇಷನ್‌ನಿಂದ ಲೋಕಸಭೆ ಸದಸ್ಯೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಲಾಯಿತು.
ಚಿಕ್ಕಮಗಳೂರು ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಕಡೂರು-ಚಿಕ್ಕಮಗಳೂರು ರೈಲ್ವೆ ಸಂಪರ್ಕವನ್ನು ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಸಮರ್ಪಣೆ ಮಾಡಲಾಗಿದೆ. ಆದರೆ ಚಿಕ್ಕಮಗಳೂರಿಗೆ ಕೇವಲ 2 ರೈಲುಗಳು ಮಾತ್ರ ಮಂಜೂರಾಗಿವೆ. ಪ್ಯಾಸೆಂಜರ್ ರೈಲಿನಲ್ಲಿ ಬೆಂಗಳೂರು ತಲುಪಲು ಅತ್ಯಧಿಕ ಸಮಯ ಬೇಕಾಗಿದೆ. ಹೀಗಾಗಿ ಚಿಕ್ಕಮಗಳೂರಿಗೆ ಇಂಟರ್ ಸಿಟಿ ರೈಲು ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಗೆ ಇಂಟರ್ ಸಿಟಿ ರೈಲು ಮಂಜೂರು ಮಾಡಿದಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವ್ಯಾಪಾರಸ್ಥರು, ಉದ್ಯೋಗಿಗಳು, ಹಿರಿಯ ನಾಗರಿಕರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವರ್ತಕರ ಸಂಘದ ಅಧ್ಯಕ್ಷ ಟಿ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ತನೋಜ್‌ಕುಮಾರ್, ನಿರ್ದೇಶಕರಾದ ರಘುಶೆಟ್ಟಿ, ನಿಖಿಲ್, ಸಾಕೇತ್, ಕೌಶಿಕ್, ಸಂಜೀವ್, ವಾಸುದೇವ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net