ಕಣಂತೂರು ದೈವಸ್ಥಾನಕ್ಕೆ ಅನುದಾನ ಹಸ್ತಾಂತರ

New Project (8)
Published on

ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಡಿಪು ವಲಯದ ಬಾಳೆಪುಣಿ ಗ್ರಾಮದ ಕಣಂತೂರು ಶ್ರೀ ಧರ್ಮ ಅರಸು ತೋಡಕುಕ್ಕಿನಾರ್ ದೈವಸ್ಥಾನದ ಅನ್ನಛತ್ರ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 1 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ರಮೇಶ್ ಹಸ್ತಾಂತರಿಸಿದರು.

ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ ಸ್ವೀಕರಿಸಿದರು. ಆನುವಂಶಿಕ ಮೊಕ್ತೇಸರರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ನಾರ್ಯಗುತ್ತು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣಂತೂರು, ಮುಡಿಪು ವಲಯದ ಮೇಲ್ವಿಚಾರಕ ರಾಜೇಶ್ ಕೆ, ಜನಜಾಗೃತಿ ಸದಸ್ಯ ಚಂದ್ರಹಾಸ ಕಣಂತೂರು, ವಿಜೇಶ್ ನಾಯ್ಕ ನಡಿಗುತ್ತು, ಸೀತಾರಾಮ ಗಟ್ಟಿ ಕಣಂತೂರು, ಉಪಾಧ್ಯಕ್ಷ ರವೀಂದ್ರ ಸೂಪಲಚ್ಚಿಲ್, ಮುಡಿಪು ವಲಯದ ಶೌರ್ಯ ವಿಪತ್ತು ತಂಡದ ಅಧ್ಯಕ್ಷ ರವೀಂದ್ರ ಕುಲಾಲ್ ಮತ್ತು ಸೇವಾ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net