

ಮಸ್ಕಿ: ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿರುವ ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡುವಂತೆ ದೇವಸ್ಥಾನ ಕಮಿಟಿಯಿಂದ ಶಾಸಕ ಆರ್‌ಬಸನಗೌಡ ತುರ್ವಿಹಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ದೇವಸ್ಥಾನಕ್ಕಾಗಿ 2.79 ಕೋಟಿ ರೂ. ವೆಚ್ಚ ತಗುಲಬಹುದೆಂದು ಅಂದಾಜು ಮಾಡಲಾಗಿದ್ದು ಈಗಾಗಲೇ ಸರ್ಕಾರ ಒಂದು ಕೋಟಿ ರೂ. ಅನುದಾನವನ್ನು ನೀಡಿದೆ. ಕಾಮಗಾರಿಯನ್ನು ಕ್ಯಾಶುಟೆಕ್ ಸಂಸ್ಥೆಗೆ ವಹಿಸಲಾಗಿದೆ.
ದೇವಸ್ಥಾನದ ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳಲು ಹಣದ ಅವಶ್ಯ ಇದೆ ಎಂದು ಮನವಿ ಮಾಡಿದರು.