ಎನ್.ಆರ್.ಪುರ ರಸ್ತೆ ಅಗಲೀಕರಣಕ್ಕೆ ಅನುದಾನ

nrp manavi
ಎನ್.ಆರ್.ಪುರದಲ್ಲಿ ಪಪಂನಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್‌ಗೆ ಮನವಿ ಸಲ್ಲಿಸಿದರು. ಪ್ರಶಾಂತ್ ಎಲ್. ಶೆಟ್ಟಿ, ಪಿ.ಆರ್.ಸದಾಶಿವ, ಜುಬೇದಾ, ಆರ್.ಕುಮಾರಸ್ವಾಮಿ, ಮುಕುಂದ, ಶೋಜಾ, ಸುರಯ್ಯಭಾನು ಇದ್ದರು.
Published on

ಎನ್.ಆರ್.ಪುರ: ಪಟ್ಟಣದ ಜನರ ಬಹು ದಶಕಗಳ ಬೇಡಿಕೆಯಾದ ರಸ್ತೆ ಅಗಲೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಪಪಂ ಆಡಳಿತ ಮಂಡಳಿಯಿಂದ ಮನವಿ ಸ್ವೀಕರಿಸಿ ಮಾತನಾಡಿ, ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಡಹಿನಬೈಲು ಏತ ನೀರಾವರಿ, ಪ್ರವಾಸಿ ಮಂದಿರ ಅಭಿವೃದ್ಧಿ, ಹೊನ್ನೇಕುಡಿಗೆ ಸೇತುವೆ ಸೇರಿದಂತೆ ಸಾಕಷ್ಟು ಅನುದಾನ ನೀಡಿದ್ದರು. ಈಗ ಪಟ್ಟಣದ ರಸ್ತೆ ವಿಸ್ತರಣೆಯಾದರೆ ಜನರ ಮನದಲ್ಲಿ ಸಿದ್ದರಾಮಯ್ಯ ಶಾಶ್ವತವಾಗಿ ಉಳಿಯುತ್ತಾರೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಹುಟ್ಟೂರಿನ ಋಣ ತೀರಿಸಲು ಎಂ.ಶ್ರೀನಿವಾಸ್ ಶ್ರಮಿಸುತ್ತಿದ್ದಾರೆ. ರಸ್ತೆ ಅಗಲೀಕರಣವಾದರೆ ಪಟ್ಟಣ ಅಭಿವೃದ್ಧಿ ಹೊಂದುತ್ತದೆ ಎಂದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಎಂ.ಶ್ರೀವಾಸ್ ಈ ಊರಿಗೆ ಕೊಡುತ್ತಿರುವ ಶಾಶ್ವತ ಕಾರ್ಯಗಳು ಜನರು ಮರೆಯುವುದಿಲ್ಲ ಎಂದು ಹೇಳಿದರು.
ಪಪಂ ಸದಸ್ಯರಾದ ಉಮಾ ಕೇಶವ್, ಸೈಯದ್ ವಸೀಂ, ಮುನಾವರ್‌ಪಾಷಾ, ಜುಬೇದಾ, ಶೋಜಾ, ಸುರಯ್ಯಬಾನು, ಆರ್.ಕುಮಾರಸ್ವಾಮಿ, ಮುಕುಂದ, ಮಾಜಿ ಸದಸ್ಯ ಸುನೀಲ್‌ಕುಮಾರ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net