

ಯಳಂದೂರು: ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ನೀಡಲಾಗುವುದು ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ಭರವಸೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣಸ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಭನವದಲ್ಲಿ ಅಡುಗೆ ಮನೆ, ಶೌಚಗೃಹ, ಕೊಠಡಿಗಳು, ಕುಡಿಯುವ ನೀರು, ಪೀಠೋಪಕರಣ ಸೇರಿದಂತೆ ಇತರೆ ಸೌಕರ್ಯಗಳ ಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಮೇ 17ರಂದು ತಾಲೂಕಿನಲ್ಲಿ ಅಂಬೇಡ್ಕರ್ ಜಯಂತಿ ಆಯೋಜಿಸಲಾಗುತ್ತಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಸಿಂಡೀಕೇಟ್ ಮಾಜಿ ಸದಸ್ಯರಾದ ಕಿನಕಹಳ್ಳಿ ರಾಚಯ್ಯ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ಬಳೇಪೇಟೆ ಲಿಂಗರಾಜುಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ಕೆಸ್ತೂರು ಸಿದ್ದರಾಜು, ಗುಂಬಳ್ಳಿ ಮಹದೇವ್, ಯರಿಯೂರು ರಾಜಣ್ಣ, ಜಯರಾಮು, ಗ್ರಾಮ ಪಂಚಾಯಿತಿ ಸದಸದ್ಯರಾದ ಯರಗಂಬಳ್ಳಿ ಮಲ್ಲು, ರೂಪೇಶ್, ಯರಿಯೂರು ನಟರಾಜು, ವೆಂಕಟೇಶ್, ರಾಜು ಸೇರಿದಂತೆ ಇತರರು ಹಾಜರಿದ್ದರು.