ಗದಗ "ಯುಜಿಡಿ'ಅಭಿವೃದ್ಧಿಗೆ ಅನುದಾನ ನೀಡಲು ಕ್ಯಾಬಿನೇಟ್​ ಸಮ್ಮತಿ: ಎಚ್​.ಕೆ. ಪಾಟೀಲ

25GDG01A
Published on

ಗದಗ ಯುಜಿಡಿ ಅಭಿವೃದ್ಧಿ, ಜಲಮೂಲಗಳ ಪುನಶ್ಚೇತನಕ್ಕೆ ಅನುದಾನ ನೀಡಲು ಸಚಿವ ಸಂಪುಟ ಸಭೆ(ಕ್ಯಾಬಿನೇಟ್​) ಸಮ್ಮತಿಸಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ನಗರದ ಯುಜಿಡಿ ಗೆ 34 ಕೋಟಿ, ಯುಜಿಡಿ ವಿಸ್ತರಣೆಗೆ 30 ಕೋಟಿ, ಜಲಮೂಲಗಳ ಪುನಶ್ಚೇತನಕ್ಕೆ ಮತ್ತು ಹಸರೀಕರಣ ಮಾಡಲು 30 ಕೋಟಿ ಮಂಜೂರು ಮಾಡಲಾಗಿದೆ. ಅದೇ ರೀತಿ ವಕಾರು ಸಾಲು 34 ಎಕರೆ ಜಮೀನಿನಲ್ಲಿ ವಾಣಿಜ್ಯ, ಪ್ರದರ್ಶನ ಕೇಂದ್ರ ಸೃಷ್ಟಿಸಿ ಸದ್ಭಳಕೆ ಮಾಡಿಕೊಳ್ಳಲು ಕ್ಯಾಬಿನೆಟ್​ ಅನುಮತಿಸಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಹಾಗೂ ಸರ್ಕಾರದ ಯೋಜನೆ ಅಳವಡಿಸಿಕೊಂಡು ಈ ಯೋಜನೆ ಜಾರಿ ಆಗಲಿದೆ. ವೈಜ್ಞಾನಿಕವಾಗಿ ವಕಾರು ಸಾಲು ಅಭಿವೃದ್ಧಿ ಮಾಡಲು ಪ್ರಾಧಿಕಾರ ರಚಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net