ಅಂಬೇಡ್ಕರ್ ಭವನ ಕಾಮಗಾರಿಗೆ ಅನುದಾನ

IMG-20250718-WA0001
ತಿ.ನರಸೀಪುರ ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ಸಂಸದ ಸುನೀಲ್ ಬೋಸ್ ವಿಶೇಷ ಘಟಕ ಯೋಜನೆ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬಸವರಾಜು, ಎಚ್.ಆರ್.ಆನಂದ್, ಮುರಳೀಧರ್, ಸುದರ್ಶನ್, ವಿನೋದ್ ಇತರರು ಇದ್ದರು.
Published on

ತಿ.ನರಸೀಪುರ: ಹಸುವಟ್ಟಿ ಗ್ರಾಮದಲ್ಲಿ ಪೂರ್ಣಗೊಳ್ಳದಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಅಂತಿಮ ಹಂತದ ಕಾಮಗಾರಿಗೆ ಸಂಸದರ ನಿಧಿಯಿಂದ ಅನುದಾನ ಮಂಜೂರು ಮಾಡುವುದಾಗಿ ಸಂಸದ ಸುನೀಲ್ ಬೋಸ್ ಭರವಸೆ ನೀಡಿದರು.

ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ವಿಶೇಷ ಘಟಕ ಯೋಜನೆ ಅನುದಾನ 20 ಲಕ್ಷ ರೂ.ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ, ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿ, ಸಮುದಾಯ ಭವನ ಸೇರಿದಂತೆ ಗ್ರಾಮದಲ್ಲಿ ಬಾಕಿ ಉಳಿದ ರಸ್ತೆಗಳ ಅಭಿವೃದ್ಧಿಗೂ ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 20 ಲಕ್ಷ ರೂ.ಗಳನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೈ ಹಿಡಿಯುತ್ತಿರುವ ಹಸುವಟ್ಟಿ ಗ್ರಾಮದ ಅಭಿವೃದ್ಧಿಗೆ ಸಚಿವ ಮಹದೇವಪ್ಪ ಹಾಗೂ ನಾನು ಕೂಡ ಬದ್ಧರಾಗಿದ್ದೇವೆ. ಅಂಬೇಡ್ಕರ್ ಭವನದ ಉದ್ಘಾಟನೆಗೆ ಪೂರಕವಾಗಿ ಅಂತಿಮ ಹಂತದ ಕಾಮಗಾರಿಗೆ ಸದ್ಯದಲ್ಲಿಯೇ ಅನುದಾನ ಮಂಜೂರು ಮಾಡಿ, ಭವನವನ್ನು ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

ತಾ.ಪಂ.ಮಾಜಿ ಅಧ್ಯಕ್ಷರಾದ ಎಚ್.ಎನ್.ಉಮೇಶ್, ಎಂ.ಮಲ್ಲಿಕಾರ್ಜುನಸ್ವಾಮಿ, ಲಕ್ಷ್ಮೀನಾರಾಯಣ, ಮುಖಂಡರಾದ ಬಸವರಾಜು, ಎಚ್.ಆರ್.ಆನಂದ್, ಮುರಳೀಧರ್, ಸುದರ್ಶನ್, ವಿನೋದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net