ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು

Grant approved for construction of community hall
Published on

ಬೀಳಗಿ:ಪಟ್ಟಣದ ಡಾ. ಬಿ.ಆರ್​. ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಂ ಸಮುದಾಯ ಭವನ ನಿರ್ಮಾಣಕ್ಕೆ ತಲಾ 1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುವುದು ಎಂದು ಶಾಸಕ ಜೆ.ಟಿ. ಪಾಟೀಲ ಭರವಸೆ ನೀಡಿದರು.ಪಟ್ಟಣದ ಮಂಗಳವಾರ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಗಜೀವನರಾಂ ಅವರ ಸಮುದಾಯ ಭವನಕ್ಕೆ 70 ಲ ರೂ. ಮಂಜೂರು ಆಗಿದ್ದು, ಇನ್ನು 1 ಕೋಟಿ ರೂ. ಮಂಜೂರು ಮಾಡಲಾಗುವುದು. ಆಶ್ರಯ ಕಾಲನಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಮುದಾಯ ಭವನ 6&7 ತಿಂಗಳಲ್ಲಿ ನಿರ್ಮಾಣಗೊಳ್ಳಬೇಕು. ಅದರ ಹತ್ತಿರ 10 ಗುಂಟೆ ಜಾಗೆಯಲ್ಲಿರುವ ಸಮುದಾಯ ಭವನ ಇನ್ನು 10 ಗುಂಟೆ ಜಾಗೆ ಅವಶ್ಯಕತೆ ಇದೆ ಎಂದು ಸಮಾಜದ ಹಿರಿಯರು ಗಮನಕ್ಕೆ ತಂದಿದ್ದು, ಈ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು.

ಬೀಳಗಿ ಪಟ್ಟಣದಲ್ಲಿರುವ ಡಾ. ಬಿ.ಆರ್​. ಅಂಬೇಡ್ಕರ್​ ಅವರ ಸಮುದಾಯ ಭವನಕ್ಕಾಗಿ ಈಗಾಗಲೇ 10 ಲ ರೂ. ನೀಡಲಾಗಿದ್ದು, ಇನ್ನು 1 ಕೋಟಿ ರೂ. ಮಂಜೂರು ಮಾಡಲಾಗುವುದು. ಹೆಚ್ಚಿನ ಅನುದಾನಕ್ಕೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ.ಪಂ. ಸದಸ್ಯರಾದ ಪಡಿಯಪ್ಪ ಕರಿಗಾರ, ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ, ಶಿವಾನಂದ ಮಾದರ, ಮಹಾದೇವ ಹಾದಿಮನಿ, ಶಿವಾನಂದ ಮಾದರ ಬಿಸನಾಳ, ಸಿದ್ದು ದಳವಾಯಿ, ಕಾಶಿಂಅಲಿ ಗೋಠೆ ಇದ್ದರು.

* ಚಿತ್ರ ಶೀರ್ಷಿಕೆ: ಬಿಎಲ್​ಜಿ&14&2

ಬೀಳಗಿ ಪಟ್ಟಣದ ಡಾ, ಬಿ.ಆರ್​. ಅಂಬೇಡ್ಕರ ಭವನ ಕಟ್ಟದ ಕಾಮಗಾರಿಯನ್ನು ಶಾಸಕ ಜೆ.ಟಿ. ಪಾಟೀಲ ವೀಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net