ಮುದಗಲ್‌ಗೆ ಕ್ರೀಡಾಂಗಣ ಮಂಜೂರು ಮಾಡಿ

Untitled design(19)
ಮುದಗಲ್‌ನಲ್ಲಿ ಎಂಎಲ್ಸಿ ಶರಣಗೌಡ ಬಯ್ಯಪುರಗೆ ಮಾನವ ಬಂಧುತ್ವ ವೇದಿಕೆ ಮನವಿ ಸಲ್ಲಿಸಿತು. ಪ್ರಮುಖರಾದ ರಾಘವೇಂದ್ರ ದೇಶಪಾಂಡೆ, ಸಂಜೀವ ಛಲವಾದಿ, ಇಕ್ಬಾಲ್ ಉಸ್ತಾದ್, ಬಸವರಾಜ ದೊಡ್ಡಮನಿ, ದೇವರಾಜ ಯಾದವ ಇತರರಿದ್ದರು.
Published on

ಮುದಗಲ್: ಪಟ್ಟಣಕ್ಕೆ ಕ್ರೀಡಾಂಗಣ ಮಂಜೂರು ಮಾಡಿಸಬೇಕೆಂದು ಒತ್ತಾಯಿಸಿ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರಗೆ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.

ಪಟ್ಟಣವು 45 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ಕ್ರೀಡಾಪಟುಗಳು, ಕ್ರೀಡಾಸಕ್ತರು ಕೂಡ ಹೆಚ್ಚಿದ್ದಾರೆ. ಕ್ರೀಡಾಪಟುಗಳ ಕೌಶಲ ಪ್ರದರ್ಶನ, ಅಭ್ಯಾಸಕ್ಕಾಗಿ ಯಾವುದೇ ಕ್ರೀಡಾ ವೇದಿಕೆ ಇಲ್ಲ. ಇದರಿಂದ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಸಮಸ್ಯೆಯಾಗಿದೆ.

ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಗುರುತಿಸಿಕೊಳ್ಳುವುದರಿಂದ ದೂರ ಉಳಿಯುವಂತಾಗಿದೆ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕ್ರೀಡಾಂಗಣ ಮಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ರಾಘವೇಂದ್ರ ದೇಶಪಾಂಡೆ, ಸಂಜೀವ ಛಲವಾದಿ, ಇಕ್ಬಾಲ್ ಉಸ್ತಾದ್, ಬಸವರಾಜ ದೊಡ್ಡಮನಿ, ದೇವರಾಜ ಯಾದವ, ಮಾರುತೇಶ, ಅಶೋಕ ಜೋಗಿ, ನವೀನ ಇಳಗಿ, ಪರಶುರಾಮ, ಮಂಗಳೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net