ಸದಾಶಿವ ಅಜ್ಜನ ಪವಾಡ ಸ್ಮರಣೀಯ

8MUGALIHAL1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0165,0.0024; brp_del_sen:0.1000,0.1000; motionR: 0; delta:null; module: photo;hw-remosaic: false;touch: (0.5720631, 0.33727673);sceneMode: 3145728;cct_value: 0;AI_Scene: (-1, -1);aec_lux: 271.2176;aec_lux_index: 0;albedo: ;confidence: ;motionLevel: 0;weatherinfo: null;temperature: 42;
Published on

ಮುಗಳಿಹಾಳ: ಸದಾಶಿವ ಅಜ್ಜನವರ ಪವಾಡಗಳು ಸ್ಮರಣೀಯ. ಪರಸ್ಪರ ಸಹಕಾರ ಹಾಗೂ ವಿಶ್ವಾಸದ ತಳಹದಿಯ ಮೇಲೆ ಎಲ್ಲರೂ ಒಗ್ಗೂಡಿ ಅದ್ದೂರಿಯಾಗಿ ಅಜ್ಜನ ಜಾತ್ರೆ ಮಾಡುತ್ತಿರುವುದು ಸಂತಸವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ದಾಸನಾಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾ, ಶಿವರುದ್ರಯ್ಯ, ಶಿವಮ್ಮ ತಾಯಿ ಹಾಗೂ ಸಂಪತ್​ ದೇವರ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರದ್ಧಾ, ಭಕ್ತಿ ಹಾಗೂ ಧಾರ್ಮಿಕ ಸೇವೆಗೆ ದಾಸನಾಳ ಹೆಸರಾಗಿದೆ. ಮಹಾತ್ಮರ ಚಿಂತನೆ ಹಾಗೂ ಪ್ರವಚನಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಸದಾಶಿವ ಅಜ್ಜನವರು ರೈತರಿಗೆ ಸಕಾಲಕ್ಕೆ ಮಳೆ ನೀಡಿ, ಸಮೃದ್ಧ ಬೆಳೆ ಜತೆಗೆ ಉತ್ತಮ ಬೆಲೆ ನೀಡಲೆಂದು ಪ್ರಾರ್ಥಿಸಿದರು.

ದಾಸೋಹ ಚಕ್ರವರ್ತಿ ಸದಾಶಿವ ಅಜ್ಜನವರು, ಭಾಗೋಜಿಕೊಪ್ಪದ ಮುರುರಾಜೇಂದ್ರ ಸ್ವಾಮೀಜಿ, ಶಿವರುದ್ರಯ್ಯ ಅಜ್ಜನವರು, ಎಪಿಎಂಸಿ ಅಧ್ಯ ನೀಲಕಂಠ ಶಿದಬಸನ್ನವರ, ಬೆಮುಲ್​ ನಿರ್ದೇಶಕರಾದ ಶಂಕರ ಇಟ್ನಾಳ, ಪ್ರಕಾಶ ವಾಲಿ, ಬಂಗಾರೆಪ್ಪ ಹರಳಿ, ಬಸು ಸತ್ತೂರಿ, ಗ್ರಾಪಂ ಸದಸ್ಯ ಪಾಂಡಪ್ಪ ಬಿರಕನ್ನವರ, ಪಿಕೆಪಿಎಸ್​ ಸದಸ್ಯ ಭೀಮಪ್ಪ ಕೌಜಲಗಿ, ಉಮೇಶ ಹೊಸೂರ, ಅಡಿವೆಪ್ಪಗೌಡ ಪಾಟೀಲ, ವಿಠ್ಠಲ ಶಿಂತ್ರಿ, ಈರಪ್ಪ ಅಂಗಡಿ, ವಿಠ್ಠಲ ದಳವಾಯಿ, ಲಕ್ಷ$್ಮಣ ದಳವಾಯಿ, ಗೋಪಾಲ ದಳವಾಯಿ, ಮುತ್ತು ಅಣ್ಣಿಗೇರಿ, ಬಸಪ್ಪ ಅರಭಾವಿ, ಅಣ್ಣೇಶಗೌಡ ಪಾಟೀಲ, ಹನುಮಂತ ಪೂಜೇರ, ಗಿಡ್ಡಪ್ಪ ಖಂಡ್ರಿ, ಪರಮೇಶ ಚತ್ರಕೋಟಿ ಇತರರಿದ್ದರು. ವಿಕ್ರಮ ಇಂಗಳೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net