ಎಲ್ಲರೂ ಸಾಮಾಜಿಕ ಸೇವೆಗೆ ಮುಂದಾಗಲಿ

Untitled design(7)
Published on

ಕನಕಗಿರಿ: ಮನುಷ್ಯ ಒತ್ತಡದಿಂದ ಮುಕ್ತನಾಗಲು ಹಾಗೂ ಆತ್ಮತೃಪ್ತಿಗೆ ಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸುಳೇಕಲ್ ಬೃಹನ್ಮಠದ ಭುವನೇಶ್ವರ ತಾತ ಹೇಳಿದರು.

ತಾಲೂಕಿನ ಸುಳೇಕಲ್ ಬೃಹನ್ಮಠದಲ್ಲಿ 68ನೇ ಜನ್ಮದಿನ ಅಂಗವಾಗಿ ಭಕ್ತರು ಹಮ್ಮಿಕೊಂಡಿದ್ದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮೊಬೈಲ್ ಯುಗದಲ್ಲಿ ಮನುಷ್ಯ ತೀವ್ರ ಒತ್ತಡದಿಂದ ಬದುಕುತ್ತಿದ್ದಾನೆ. ಆಚರಣೆ, ಸಂಸ್ಕೃತಿ, ಪರಂಪರೆಯನ್ನು ಮರೆಯಬಾರದು. ಅಲ್ಪ ತೃಪ್ತಿಗಾಗಿ ಬಡಿದಾಡುವುದನ್ನು ಬಿಡಬೇಕು. ಮನ ಆನಂದಕ್ಕಾಗಿ ಸಾಮಾಜಿಕ ಸೇವೆ ಎಂಬ ಕಾಯಕವನ್ನು ಮೈಗೂಡಿಸಿಕೊಂಡು ಸಂತೃಪ್ತಿಯೆಡೆಗೆ ಹೆಜ್ಜೆ ಇಟ್ಟಾಗ ಮಾತ್ರ ಮಾನವ ಕುಲ ಪರಮ ವೈಭವದ ಕಡೆಗೆ ಸಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಶ್ರೀಗಳಿಗೆ ಪುಷ್ಪ ಸಮರ್ಪಿಸುವ ಮೂಲಕ ಜನ್ಮದಿನದ ಶುಭ ಕೋರಿ ಆಶೀರ್ವಾದ ಪಡೆದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಕುಲಬಾಗಿಲಮಠ, ಜಿ.ಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ರಮೇಶ ಶ್ರೇಷ್ಠಿ ಸಿರಿವಾರ, ರವಿ ಪಾಟೀಲ್, ಈಶಪ್ಪ ಸುಳೇಕಲ್, ನಿರುಪಾದಿ ಸಿರಿವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net