ಕುಲರತ್ನಭೂಷಣ ಮಹಾರಾಜರಿಗೆ ಭವ್ಯ ಸ್ವಾಗತ

tdl 9-3b
ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಆಚಾರ್ಯ ಕುಲರತ್ನಭೂಷಣ ಮಹಾರಾಜರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
Published on

ತೇರದಾಳ: ಎರಡು ವರ್ಷಗಳಿಂದ ದೇಶ ಸಂಚಾರದಲ್ಲಿದ್ದ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಮಹಾರಾಷ್ಟ್ರದ ಅಬ್ದುಲವಾಟ್ ಮಾರ್ಗವಾಗಿ ಹಳಿಂಗಳಿ ಗ್ರಾಮ ಪ್ರವೇಶಿಸುವ ಕಾರ್ಯಕ್ರಮ ಸೋಮವಾರ ಬೆಳಗ್ಗೆ ಸಂಭ್ರಮದಿಂದ ನಡೆಯಿತು.

ಗ್ರಾಮದ ತೇರದಾಳ ರಸ್ತೆ ಮೂಲಕ ಭವ್ಯ ಮೆರವಣಿಗೆಯಲ್ಲಿ ಝಾಂಜ್ ಪಥಕ್, ಕರಡಿ ಮಜಲು, ಶ್ರಾವಕಿಯರ ಕೋಲು ನೃತ್ಯ ಸೇರಿ ಹಲವು ವಾದ್ಯಮೇಳಗಳು ಮೇಳೈಸಿದವು.

ಗುರುಮಹಾರಾಜ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ದಾರಿಯುದ್ದಕ್ಕೂ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಮನೆಮನೆಗಳ ಮುಂದೆ ಮಹಾರಾಜರ ಪಾದಪೂಜೆ ನೆರವೇರಿತು. ಆರಿಕಾಗಳಾದ 105 ಜ್ಞಾನಭೂಷಣಮತಿ, ದರ್ಶನಭೂಷಣಮತಿ, ಚಾರಿತ್ರಭೂಷಣಮತಿ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.

ಶಾಲಾ ಮಕ್ಕಳು, ಶ್ರಾವಕ, ಶ್ರಾವಕಿಯರು ಕುಮಾರ, ಕುಮಾರಿಕೆಯರು ಸಮವಸಗಳಲ್ಲಿ ಭಾಗಿಯಾಗಿದ್ದರು.

ತೇರದಾಳ ರಸ್ತೆಯ ಯಲ್ಲಟ್ಟಿ ತೋಟದ ಮಾರ್ಗವಾಗಿ ಶರಣಬಸವೇಶ್ವರ ಮಠದ ಮುಖ್ಯರಸ್ತೆ, ಅಹಿಂಸಾ ಶಾಲೆ, ಬಸ್ ನಿಲ್ದಾಣ, ಮಹಾವೀರ ವೃತ್ತ, ಜೀನಬಸದಿ ಪ್ರಮುಖ ಬೀದಿಗಳ ಮೂಲಕ ಭದ್ರಗಿರಿಯವರೆಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net