ಕನ್ನಡ ಉಳಿಸಿ-ಬೆಳೆಸಲು ಬದ್ಧರಾಗಿ

13kmr1
ಕಮಲನಗರ ತಾಲೂಕಿನ ಸಂಗಮ ಕ್ರಾಸ್ ಹತ್ತಿರ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಯಾತ್ರೆಗೆ ಶನಿವಾರ ಅದ್ದೂರಿ ಸ್ವಾಗತ ಕೋರಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಎಡಿ ಹಣಮಂತರಾಯ ಕೌಟಗೆ, ಪ್ರೊ.ಎಸ್.ಎನ್.ಶಿವಣಕರ, ಸಿಪಿಐ ಅಮರಪ್ಪ ಎಸ್, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಉಪತಹಸೀಲ್ದಾರ್ ಗೋಪಾಲಕೃಷ್ಣ, ಎಇಇ ಸುಭಾಷ ಇತರರಿದ್ದರು.
Published on

ಕಮಲನಗರ: ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಶನಿವಾರ ಕಮಲನಗರ ತಾಲೂಕಿಗೆ ಪ್ರವೇಶಿಸಿತು.

ಭಾಲ್ಕಿ ಮೂಲಕ ತಾಲೂಕಿನ ಸಂಗಮ ಕ್ರಾಸ್ ಹತ್ತಿರ ರಥ ಪ್ರವೇಶಿಸುತ್ತಿದ್ದಂತೆ ತಾಲೂಕು ಆಡಳಿತ, ಕನ್ನಡಾಭಿಮಾನಿಗಳು, ಗ್ರಾಮಸ್ಥರು, ಕಸಾಪ ಪದಾಧಿಕಾರಿಗಳು ಸ್ವಾಗತ ಕೋರಿದರು.

ಖೇಡ್ ಗ್ರಾಪಂ ಅಧ್ಯಕ್ಷ ಹಣಮಂತ ದಾನಾ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಶ್ರೇಷ್ಠ ಪರಂಪರೆ, ಸಂಸ್ಕೃತಿ ಇದ್ದು, ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳೆಸಲು ಬದ್ಧರಾಗಿರಬೇಕು ಎಂದರು.

ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಮಾತನಾಡಿ, ತಾಯಿ ಭಾಷೆ ಕನ್ನಡದ ಕುರಿತು ಎಲ್ಲರಲ್ಲಿ ಗೌರವ ಇರಬೇಕು. ಕನ್ನಡ ಕೇವಲ ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ ಎಂಬುದನ್ನು ಯಾರು ಮರೆಯಬಾರದು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎನ್.ಶಿವಣಕರ ಮಾತನಾಡಿದರು.

ಕಮಲನಗರ ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಖೇಡ್ ಗ್ರಾಪಂ ಉಪಾಧ್ಯಕ್ಷೆ ಬಾಲಿಕಾ ಸೂರ್ಯವಂಶಿ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಎಡಿ ಹಣಮಂತರಾಯ ಕೌಟಗೆ, ಸಿಪಿಐ ಅಮರಪ್ಪ ಎಸ್, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಉಪ ತಹಸೀಲ್ದಾರ್ ಗೋಪಾಲಕೃಷ್ಣ, ಎಇಇ ಸುಭಾಷ, ಶಿವಶಂಕರ ಟೋಕರೆ, ಪ್ರವೀಣ ಬಿರಾದಾರ, , ಬಿಆರ್‌ಪಿ ಶಶಿಕಾಂತ ಬಿಡವೆ, ಇನಿಲಕುಮಾರ ಹೊಳಸಮುದ್ರೆ, ಯಶವಂತ ಬಿರಾದಾರ, ಧನರಾಜ ಭವರಾ, ಬಸವರಾಜ ಪಾಟೀಲ್, ಮಹಾದೇವ ಮಡಿವಾಳ, ಸಂತೋಷ ಸುಲಾಕೆ, ಶ್ರೀರಂಗ ಪರಿಹಾರ, ಶಿವರಾಜ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net