ಶರಣಮ್ಮ ತಾಯಿ ಚಕ್ಕಡಿ ಯಾತ್ರೆಗೆ ಅದ್ದೂರಿ ಸ್ವಾಗತ

Grand welcome for Mother Sharanamma's Chakkadi Yatra
ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶರಣಮ್ಮನವರ ಚಕ್ಕಡಿಯಾತ್ರೆಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು.
Published on

ಇಳಕಲ್ಲ(ಗ್ರಾ): ಕಂದಗಲ್ಲ ಗ್ರಾಮದಲ್ಲಿ ಬುಧವಾರ ಶಿವಶರಣೆ ಕಂಬಳಿಹಾಳ ಸಜ್ಜಲಗುಡ್ಡದ ಶರಣಮ್ಮ ತಾಯಿಯವರ ಭಾವಚಿತ್ರದ ಚಕ್ಕಡಿಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಅಮ್ಮನವರ ದೀಕ್ಷಾಗುರು ಗುಡದೂರಿನ ಲಿ.ದೊಡ್ಡಬಸವರ್ಯರ ಜಾತ್ರಾ ಮಹೋತ್ಸವ ಹಾಗೂ ಬಸವಾರ್ಯ ತಾತನವರ ಪುಣ್ಯಸ್ಮರಣತ್ಸವದ ಅಂಗವಾಗಿ ಸಜ್ಜಲಗುಡ್ಡ ಕಂಬಳಿಹಾಳದ ಶರಣಮ್ಮನವರ ಮಠದ ಧರ್ಮಧಿಕಾರಿ ದೊಡ್ಡಬಸವಾರ್ಯ ತಾತನವರು ಹಾಗೂ ಶರಣಮ್ಮ ತಾಯಿಯವರ ನೇತೃತ್ವದಲ್ಲಿ ಚಕ್ಕಡಿ, ಟ್ರ್ಯಾಕ್ಟರ್ ಮತ್ತಿತರ ವಾಹನ ಹಾಗೂ ಕಾಲ್ನಡಿಗೆ ಮೂಲಕ ಆಗಮಿಸಿದ ಮೆರವಣಿಗೆಯನ್ನು ಕಂದಗಲ್ಲ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಹತ್ತಿರ ಸುಮಂಗಲೆಯರು ಆರತಿ ಬೆಳಗಿ, ಕಾಯಿ-ಕರ್ಪೂರ ಅರ್ಪಿಸಿ ಸ್ವಾಗತಿಸಿದರು.

ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಚಕ್ಕಡಿ ಯಾತ್ರೆ ಸಂಚರಿಸಿ ಕೆಜಿಎಸ್ ಶಾಲೆ ಹತ್ತಿರ ಬೀಳ್ಕೊಡಲಾಯಿತು.

ಚನ್ನಪ್ಪಗೌಡ ನಾಡಗೌಡ್ರ, ರಾಹುಲ್ ಧಣಿ, ತಾಪಂ ಮಾಜಿ ಅಧ್ಯಕ್ಷ ಮಹಾಂತೇಶ ಕಡಿವಾಲ, ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಬಸೆಟ್ಟಪ್ಪ ಸಜ್ಜನ, ಚಂದ್ರಶೇಖರಯ್ಯ ಗುರುವಿನಮಠ, ಚನ್ನಪ್ಪ ಜಾಲಿಹಾಳ, ಶಂಬಣ್ಣ ಡಂಬಳ, ಆನಂದ ಜವಾನರ, ಮಹಾಂತೇಶ ಗೋಧಿ, ಅಮರೇಶ ಕೊಡಕೇರಿ, ಶರಣಯ್ಯ ಮಠ, ರುದ್ರಪ್ಪ ಶೀಲವಂತರ, ಮಲ್ಲಪ್ಪ ಪೋತನಾಳ, ದೊಡ್ಡಪ್ಪ ಹುಜರತಿ, ರವಿಕುಮಾರ ಕಂಠಿ, ಅಮಾತೆಪ್ಪ ಯರದಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net