

ಅರಸೀಕೆರೆ (ಗ್ರಾಮಾಂತರ): ತಾಲೂಕಿನ ಬಾಣಾವರ ಪಟ್ಟಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರಿಂದ ಆಯೋಜಿಸಲಾಗಿರುವ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ರಥಯಾತ್ರೆ ಭಾನುವಾರ ಆಗಮಿಸಿದ ವೇಳೆ ಗ್ರಾಮ ಪಂಚಾಯಿತಿ ವತಿಯಿಂದ ಕನ್ನಡ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ವೀಣಾ ವಿಶ್ವನಾಥ್, ಸದಸ್ಯ ವಿಶ್ವನಾಥ್, ಪಿಡಿಒ ಕುಮಾರಸ್ವಾಮಿ ಹಾಗೂ ಸಿಬ್ಬಂದಿ, ಗ್ರಾಮಸ್ಥರಾದ ಬಿ.ಜೆ. ಭಾಸ್ಕರ್, ಧರ್ಮ, ಯೋಗೀಶ್, ಮುದ್ದಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ವಾಸುದೇವ್, ದೈಹಿಕ ಶಿಕ್ಷಕಿ ಶೋಭಾ, ಶಿಕ್ಷಕರಾದ ಡಿ.ಎನ್.ರಮೇಶ್, ಕೆ.ರಮೇಶ್, ಶ್ರೀಧರ್‌ಮೂರ್ತಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.