ಕಡಬದಲ್ಲಿ ಕನ್ನಡ ರಥಕ್ಕೆ ಭವ್ಯ ಸ್ವಾಗತ

Kdb_Kannada
Published on

ಕಡಬ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಚರಿಸಿ ಕಡಬ ತಾಲೂಕನ್ನು ಪ್ರವೇಶಿಸಿದ ಕನ್ನಡ ಜ್ಯೋತಿ ರಥವನ್ನು ಕಡಬ ತಾಲೂಕು ಕೇಂದ್ರದಲ್ಲಿ ಸ್ವಾಗತಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಪ್ರಮುಖರು ಪೆರಿಯಶಾಂತಿ ಬಳಿ ರಥವನ್ನು ಎದುರುಗೊಂಡು ಕಡಬ ತಾಲೂಕಿಗೆ ಬರಮಾಡಿಕೊಂಡರು.

ರಥದಲ್ಲಿದ್ದ ಕನ್ನಡ ಭುವನೇಶ್ವರಿಯ ಮೂರ್ತಿಗೆ ಕಡಬ ಪೇಟೆಯಲ್ಲಿ ಹಾರ ಹಾಕಿ ಪುಷ್ಪಾರ್ಚನೆಗೈದ ಪ್ರಮುಖರು ಹಾಗೂ ಕನ್ನಡಾಭಿಮಾನಿಗಳು ಕನ್ನಡಪರ ಘೋಷಣೆಗಳನ್ನು ಮೊಳಗಿಸಿದರು. ರಥಯಾತ್ರೆ ಕುರಿತು ವಿವರಿಸಿದ ಕನ್ನಡ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಂಡ್ಯದಲ್ಲಿ ಡಿ.20ರಿಂದ 3 ದಿನ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥವು ನಾಡಿನಾದ್ಯಂತ ಸಂಚರಿಸುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಕೆ.ಸೇಸಪ್ಪ ರೈ, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಪದಾಧಿಕಾರಿಗಳಾದ ಕಿಶೋರ್ ರಾಮಕುಂಜ, ಬಾಲಚಂದ್ರ ಮುಚ್ಚಿಂತ್ತಾಯ, ಮಹಮ್ಮದ್ ಕುಂಞಿ ಕಡಬ, ನಾಗರಾಜ್ ಎನ್.ಕೆ., ಯಶವಂತ ರೈ, ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕಡಬ ತಾ.ಪಂ. ಉಪ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ವ್ಯವಸ್ಥಾಪಕ ಭುವನೇಂದ್ರ ಕುಮಾರ್, ಕಡಬ ಸಿಎ ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಮೇಲಿನಮನೆ, ಗ್ರಾಮ ಲೆಕ್ಕಾಧಿಕಾರಿಗಳಾದ ಶೇಷಾದ್ರಿ, ಸಂತೋಷ್, ಪ್ರೇಮಾ ಮ್ಯಾಗರಿ, ಕಡಬ ಸಹಾಯಕ ಉಪನಿರೀಕ್ಷಕ ಶಿವರಾಮ, ಸಿಬ್ಬಂದಿ ಹರೀಶ್, ಕಂದಾಯ ಇಲಾಖಾ ಸಿಬಂದಿ ಭಾರತಿ ಹೊಸಮನೆ, ರಕ್ಷಾ ಜೈನ್, ಅಕ್ಷತಾ, ವಿಜಯಕುಮಾರ್, ಕಡಬ ಪಟ್ಟಣ ಪಂಚಾಯಿತಿ ಸಿಬಂದಿ ಹರೀಶ್ ಬೆದ್ರಾಜೆ, ರಿಯಾಜ್, ಆಟೋ ಚಾಲಕ-ಮಾಲೀಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net