ಹಿರೇಕೆರೂರಲ್ಲಿ ಶರಭಿ ಗುಗ್ಗುಳ ಭವ್ಯ ಮೆರವಣಿಗೆ

HKR GUGGULA
Published on

ಹಿರೇಕೆರೂರ: ಪಟ್ಟಣದ ತೋಂಟದ ವೀರಭದ್ರೇಶ್ವರ ದೇವಸ್ಥಾನ ಕಳಸಾರೋಹಣದ ಪ್ರಥಮ ವರ್ಷದ ವಾರ್ಷಿಕೋತ್ಸವದ ನಿಮಿತ್ತ ರುದ್ರಹೋಮ, ಶರಭಿ ಗುಗ್ಗುಳ, ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಶನಿವಾರ ಹಾಗೂ ಭಾನುವಾರ ನೆರವೇರಿದವು.

ಶಿವಾನಂದಯ್ಯ ಪಿಳಿಗಿಮಠ, ಬಸವಕುಮಾರ ಮಳಲಿಮಠ, ಹೀರಣ್ಣಯ್ಯ ಹಿರೇಮಠ, ಪ್ರಶಾಂತಯ್ಯ ಮಠದ, ಗದಿಗೆಯ್ಯ ಹಿರೇಮಠ ಶಾಸ್ತ್ರೀಗಳಿಂದ ಶನಿವಾರ ಬೆಳಗ್ಗೆ ದೇವರಿಗೆ ರುದ್ರಾಭಿಷೇಕ, ರುದ್ರಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಜರುಗಿದವು. ಭಾನುವಾರ ವೀರಭದ್ರೇಶ್ವರ, ಭದ್ರಕಾಳಿ, ಇಡಗುಂಜಿ ಮಹಾಗಣಪತಿ ಮತ್ತು ಪೇಟೆ ಬಸವೇಶ್ವರ ದೇವರುಗಳಿಗೆ ರುದ್ರಾಭಿಷೇಕ, ಶಿವಾಷ್ಠೋತ್ತರ ಮಹಾಮಂಗಳಾರತಿ ನೆರವೇರಿತು. 6.30ಕ್ಕೆ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಇಂಗಳಗೊಂದಿಯ ಶಿವಯೋಗಿ ಗೂಳಪ್ಪನವರ ಮತ್ತು ಸಂಗಡಿಗರ ಪುರವಂತಿಕೆ, ಬೆಟಕೆರೂರಿನ ಮೈಲಾರೆಪ್ಪ ಕೊರಗರ ಮತ್ತು ಸಂಗಡಿಗರ ಸಮ್ಮಾಳ ವಾದ್ಯದೊಂದಿಗೆ ಶರಭಿ ಗುಗ್ಗುಳ ಕೊಡಗಳ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ತೋಂಟದ ವೀರಭದ್ರೇಶ್ವರ ದೇವಸ್ಥಾನಕ್ಕೆ ಮರಳಿ ಸಂಪನ್ನಗೊಂಡಿತು. ಅಲ್ಲಿ ವಿವಿಧ ಧಾರ್ವಿುಕ ಕೈಂಕರ್ಯಗಳನ್ನು ನೆರವೇರಿಸಿ ಕೊಡಗಳನ್ನು ಅಗ್ನಿ ಆಹುತಿ ಮಾಡಲಾಯಿತು. ನಂತರ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ರಾಯನಗೌಡ್ರ, ಪಪಂ ಸದಸ್ಯ ಕಂಠಾಧರ ಅಂಗಡಿ, ಪರಮೇಶಪ್ಪ ಹಳಕಟ್ಟಿ, ರುದ್ರೇಶ ಬೇತೂರ, ಮಹೇಶ ಅಸುಂಡಿ, ಇಂದುಧರ ಹಿರೇಮಠ, ಪ್ರಕಾಶ ಹಂಪಾಳಿ, ರವಿ ಶೆಟ್ಟರ, ಉಳಿವಿಗೌಡ ವೀರನಗೌಡ್ರ, ವಿಜಯಕುಮಾರ ಹಳಕಟ್ಟಿ, ಸಂತೋಷ ವಾಲಿ, ಶಂಕ್ರಪ್ಪ ಅಂಗಡಿ, ರಾಜು ಹಾದ್ರಿಹಳ್ಳಿ, ರಾಕೇಶ ಶೆಟ್ಟರ, ಶಂಕ್ರಪ್ಪ ಕೋರಿ, ಮಲ್ಲಿಕಾರ್ಜುನ ಹಳಕಟ್ಟಿ, ಸಿದ್ದು ಹಳಕಟ್ಟಿ, ಪ್ರಶಾಂತ ಹಳಕಟ್ಟಿ, ವಿನಾಯಕ ಹರಿಹರ, ಪ್ರವೀಣ ಪೂಜಾರ, ಕೊಟ್ರೇಶಣ್ಣ ಹಳಕಟ್ಟಿ, ಗಜೇಂದ್ರ ಹಳ್ಳೂರ, ಜಗದೀಶ ಶೆಟ್ಟರ್ ಹಾಗೂ ಭಕ್ತಾದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net