ಭಾರತಮಾತೆ ಭಾವಚಿತ್ರದ ಭವ್ಯ ಶೋಭಾಯಾತ್ರೆ

25 KLDG
ಕಲಾದಗಿಯಲ್ಲಿ ಶುಕ್ರವಾರ ಭಾರತಮಾತೆ ಭಾವಚಿತ್ರದ ಶೋಭಾಯಾತ್ರೆ ನಡೆಯಿತು.
Published on

ಕಲಾದಗಿ: ಗ್ರಾಮದಲ್ಲಿ ಅ.27 ರಂದು ನಡೆಯಲಿರುವ ಆರ್.ಎಸ್‌ಎಸ್. ಪಥಸಂಚಲನ ಹಾಗೂ ಬೌದ್ಧಿಕ ಸಭೆಯ ಪೂರ್ವಭಾವಿಯಾಗಿ ಶುಕ್ರವಾರ ಪ್ರಮುಖ ರಸ್ತೆಗಳಲ್ಲಿ ಭಾರತಮಾತೆ ಭಾವಚಿತ್ರದ ಶೋಭಾಯಾತ್ರೆ ನಡೆಯಿತು.

ಬಯಲು ರಂಗಮಂದಿರದಿಂದ ಹೊರಟ ಅಲಂಕೃತ ಎತ್ತಿನ ಬಂಡಿಯಲ್ಲಿದ್ದ ಭಾರತಮಾತೆಯ ಭಾವಚಿತ್ರವಿದ್ದ ಬೃಹತ್ ಮೆರವಣಿಗೆ ಭಾರತಮಾತೆ ಪರ ಜಯಘೋಷಣೆಗಳೊಂದಿಗೆ ಅಂಬೇಡ್ಕರ್ ವೃತ್ತ, ಗಡ್ಡಿ ಓಣಿ, ಹೊಸೂರ ಚೌಕ, ಬಾಗವಾನರ ಓಣಿ, ಕೊಬ್ಬರಿ ಕ್ರಾಸ್, ಕಾಯಿಪಲ್ಲೆ ಮಾರುಕಟ್ಟೆ, ಮರಾಠ ಗಲ್ಲಿ, ಬಸವೇಶ್ವರ ವೃತ್ತ, ಬಸ್ ನಿಲ್ದಾಣಗಳ ಮೂಲಕ ಸಾಗಿ ಎಲ್ಲರ ಗಮನಸೆಳೆಯಿತು.

ಶೋಭಾಯಾತ್ರೆಯ ಮಾರ್ಗಗಳನ್ನು ಅಲಂಕರಿಸಲಾಗಿತ್ತು. ಪ್ರತಿ ಮನೆ ಮುಂದೆ ಯಾತ್ರೆ ಮುಂದೆ ನೀರು ಹಾಕಿ ಗೌರವಿಸಿ ಮಹಿಳೆಯರು ಭಾರತಮಾತೆ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪ ಅರ್ಪಿಸಿದರು.

ಅ.27 ರಂದು ಸಂಜೆ 4.10ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣವೇಶಧಾರಿ ಸ್ವಯಂ ಸೇವಕರಿಂದ ಘೋಷ್ ಸಹಿತ ಪಥಸಂಚಲನ ನಡೆಯಲಿದೆ. ಸಂಜೆ 5-15ಕ್ಕೆ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆ ಆವರಣದಲ್ಲಿ ಬೌದ್ಧಿಕ ಸಭೆ ನಡೆಯಲಿದೆ.

ಯಡಹಳ್ಳಿಯ ಅಜಾತಲಿಂಗ ಸಾಧು ಮಠದ ಬಸವಾನಂದ ಭಾರತಿ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಆರ್‌ಎಸ್‌ಎಸ್‌ನ ವಿಜಯಪುರ ವಿಭಾಗದ ಸೇವಾ ಪ್ರಮುಖ ಪ್ರಭು ಹೂಗಾರ ಮುಖ್ಯ ವಕ್ತರರಾಗಿ ಉಪಸ್ಥಿತರಿರುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net