ಅಂಬಾಭವಾನಿ ದೇವಿ ಮೂರ್ತಿಯ ಭವ್ಯ ಮೆರವಣಿಗೆ

tlk mervanige
ತಾಳಿಕೋಟೆ ಪಟ್ಟಣದ ಗೋಂದಳಿ ಸಮಾಜ ಬಾಂಧವರ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಅಂಬಾಭವಾನಿ ದೇವಿ ಮೂರ್ತಿ ಮೆರವಣಿಗೆ ನಡೆಯಿತು.
Published on

ತಾಳಿಕೋಟೆ: ಪಟ್ಟಣದ ಅಂಬಾಭವಾನಿ ಗೋಂದಳಿ ಸಮಾಜದ ಆರಾಧ್ಯ ದೇವತೆ ಅಂಬಾಭವಾನಿ ನೂತನ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನಾ ನಿಮಿತ್ತ ಸೋಮವಾರ ಅಂಬಾಭವಾನಿ ಮೂರ್ತಿ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ 10 ಗಂಟೆಗೆ ರಾಜವಾಡೆಯಲ್ಲಿರುವ ಶ್ರೀ ಶಿವಭವಾನಿ ಮಂದಿರದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ವಾದ್ಯಮೇಳದೊಂದಿಗೆ ಭೀಮನಭಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮ ಮುಗಿಸಿ ಮರಳಿ ದೇವಸ್ಥಾನ ತಲುಪಿತು.

ಮೆರವಣಿಗೆಯಲ್ಲಿ ಡೋಲು, ಡೊಳ್ಳು ವಾದ್ಯ, ಗೊಂಬೆ ಕುಣಿತ ಪಾಲ್ಗೊಂಡಿದ್ದವು.

ಫೆ. 18 ರಂದು ಅಂಬಾಭವಾನಿ ದೇವಿ ಮೂರ್ತಿ ಜತೆಗೆ ರಾಮ, ಲಕ್ಷ್ಮಣ, ಸೀತಾ, ಗಣೇಶ, ಮಹಾಲಕ್ಷ್ಮೀ, ಆಂಜನೇಯ, ಸಿಂಹ, ಆಮೆ ಮೂರ್ತಿಗಳ ಪ್ರತಿಷ್ಠಾಪನೆಯೂ ನಡೆಯಲಿದೆ. ಬೆಳಗ್ಗೆ 6 ಗಂಟೆಯಿಂದ ಸಂತೋಷಭಟ್ ಜೋಶಿ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಮಧ್ಯಾಹ್ನ 1 ಗಂಟೆಗೆ ಮಹಾ ಪ್ರಸಾದ ಏರ್ಪಡಿಸಲಾಗಿದೆ, ನಂತರ ಧರ್ಮಸಭೆ ನಡೆಯಲಿದೆ.

ಮೆರವಣಿಗೆಯಲ್ಲಿ ಗೋಂದಳಿ ಸಮಾಜದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net